ರಾಮೇಶ್ವರ: ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ದೇಶವು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ತಮಿಳುನಾಡಿನ ರಾಮೇಶ್ವರಂದಲ್ಲಿ ಇಂದು (ಶನಿವಾರ) 'ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಮೆಮೊರಿಸ್ ನೆವರ್ ಡೈ' ಪುಸ್ತಕದ ಬಿಡುಗಡೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಮಾಜಿ ರಾಷ್ಟ್ರಪತಿ, ಅಪ್ರತಿಮ ವಿಜ್ಞಾನಿ, ದಿವಂಗತ ಕಲಾಂ ಅವರ ದೂರದೃಷ್ಟಿಯಲ್ಲಿ ಭಾರತ ಮುನ್ನಡೆಯುತ್ತಿದೆ ಎಂದು ಹೇಳಿದ್ದಾರೆ.
ದೇಶದ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಕಲಾಂ ಅವರ ಕೊಡುಗೆಯನ್ನು ಅಮಿತ್ ಶಾ ಅವರು ಕೊಂಡಾಡಿದರು.
ಪ್ರಧಾನಿ ಮೋದಿ ಅವರ ಮುಂದಾಳತ್ವದಲ್ಲಿ ಬಾಹ್ಯಾಕಾಶ ವಿಜ್ಞಾನದಲ್ಲಿ ನಮ್ಮ ವಿದ್ಯಾರ್ಥಿಗಳು, ಯುವ ಜನಾಂಗ ಮತ್ತು ನವೋದ್ಯಮಗಳಿಗೆ ಮುಕ್ತ ಅವಕಾಶವಿದೆ. ಅಬ್ದುಲ್ ಕಲಾಂ ಅವರ ಬಾಹ್ಯಾಕಾಶ ವಿಜ್ಞಾನದ ಸಾಧನೆಗಳ ಕನಸುಗಳು ಪ್ರಧಾನಿ ಮೋದಿ ಅವರ ಅವಿಷ್ಕಾರ ಮತ್ತು ಹೊಸ ಉಪಕ್ರಮಗಳಿಂದ ನನಸಾಗುತ್ತಿದೆ. ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಇಡೀ ಜಗತ್ತನೇ ಭಾರತ ಮುನ್ನಡೆಸಲಿದೆ ಎಂದು ನಾನು ನಂಬುತ್ತೇನೆ ಎಂದು ಹೇಳಿದ್ದಾರೆ.
ಮೋದಿ ಮುಂದಾಳತ್ವದಲ್ಲಿ ದೇಶವು 55 ಬಾಹ್ಯಾಕಾಶ ನೌಕೆ ಮಿಷನ್, 50 ಉಡಾವಣಾ ವಾಹಕ ಮಿಷನ್, ಮತ್ತು 11 ವಿದ್ಯಾರ್ಥಿಗಳ ಉಪಗ್ರಹಗಳ ಮಿಷನ್ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಏಕಕಾಲದಲ್ಲಿ ಪಿಎಲ್‌ಎಲ್‌ವಿ-ಸಿ37 ರಾಕೆಟ್ ಮೂಲಕ 104 ಉಪಗ್ರಹಗಳನ್ನುಉಡ್ಡಯನ ಮಾಡಿರುವುದನ್ನು ಅಮಿತ್ ಶಾ ಉಲ್ಲೇಖಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.