ADVERTISEMENT

ಸಿಎಎ ಕಾಯ್ದೆ ಹಿಂಪಡೆಯುವುದಿಲ್ಲ: ಅಮಿತ್ ಶಾ

ವಿರೋಧಪಕ್ಷಗಳ ವಿರುದ್ಧ ವಾಗ್ದಾಳಿ

ಪಿಟಿಐ
Published 21 ಜನವರಿ 2020, 20:19 IST
Last Updated 21 ಜನವರಿ 2020, 20:19 IST
ಅಮಿತ್ ಶಾ
ಅಮಿತ್ ಶಾ   

ಲಖನೌ: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿದ್ದರೂ, ಈ ಕಾನೂನನ್ನು ಹಿಂಪಡೆಯುವುದಿಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಮಂಗಳವಾರ ಹೇಳಿದರು.

ಸಿಎಎ ಪರವಾಗಿ ಆಯೋಜಿಸಲಾಗಿದ್ದ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ಯಾರದೇ ಪೌರತ್ವವನ್ನೂ ಕಸಿದುಕೊಳ್ಳಲು ಈ ತಿದ್ದುಪಡಿ ಕಾನೂನಿನಲ್ಲಿ ಅವಕಾಶವಿಲ್ಲ. ಇದು ಪೌರತ್ವ ನೀಡಲು ಇರುವ ಕಾನೂನು’ ಎಂದು ಹೇಳಿದರು.

ಸಿಎಎ ಕುರಿತು ಸಾರ್ವಜನಿಕ ವೇದಿಕೆಯಲ್ಲಿ ತಮ್ಮೊಂದಿಗೆ ಚರ್ಚೆ ನಡೆಸಲಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಬಹುಜನ ಸಮಾಜ ಪಕ್ಷದ ಮಾಯಾವತಿ ಹಾಗೂ ಟಿಎಂಸಿಯ ಮಮತಾ ಬ್ಯಾನರ್ಜಿ ಅವರನ್ನು ಹೆಸರಿಸಿ ಸವಾಲು ಹಾಕಿದರು.

ADVERTISEMENT

‘ಮುಸ್ಲಿಮರು ಸೇರಿದಂತೆ ಯಾರದೇ ಪೌರತ್ವವನ್ನು ಕಸಿದುಕೊಳ್ಳುವಂತಹ ನಿಯಮ ಸಿಎಎನಲ್ಲಿದ್ದರೆ ನನಗೆ ತಿಳಿಸಬಹುದು. ಸಿಎಎ ವಿರುದ್ಧ ದೇಶದೆಲ್ಲೆಡೆ ಆಯೋಜಿಸಲಾಗುತ್ತಿರುವ ಧರಣಿ, ಪ್ರತಿಭಟನೆಗಳು ತಪ್ಪು’ ಎಂದು ಅವರು ಹೇಳಿದರು.

‘ಎನ್‌ಪಿಆರ್ ಮಾಹಿತಿ ಕಡ್ಡಾಯವಲ್ಲ’
ನವದೆಹಲಿ (ಪಿಟಿಐ):
‘ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪ್ರಕ್ರಿಯೆಯಲ್ಲಿ (ಎನ್‌ಪಿಆರ್) ಮಾಹಿತಿ ನೀಡುವುದು ಕಡ್ಡಾಯವಲ್ಲ. ಆದುಸ್ವಯಂ ಪ್ರೇರಿತ’ ಎಂದು ಕೇಂದ್ರ ಗೃಹಖಾತೆಯ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ತಿಳಿಸಿದ್ದಾರೆ.

‘ಮೊದಲಿಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 2010ರಲ್ಲಿ ಎನ್‌ಪಿಆರ್ ಪ್ರಕ್ರಿಯೆ ಆರಂಭಿಸಿತು. ಇದು ಸಂವಿಧಾನದ ನಿಯಮ. ಹಾಗಾಗಿ ರಾಜ್ಯಸರ್ಕಾರಗಳು ಇದನ್ನು ವಿರೋಧಿಸಬಾರದು’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.