ADVERTISEMENT

ಶಂಖ, ಚಪ್ಪಾಳೆ ಕುರಿತು ಬಚ್ಚನ್‌ ಟ್ವೀಟ್‌: ಟೀಕೆ ನಂತರ ಡಿಲೀಟ್‌

ಪಿಟಿಐ
Published 24 ಮಾರ್ಚ್ 2020, 4:49 IST
Last Updated 24 ಮಾರ್ಚ್ 2020, 4:49 IST
   

ಮುಂಬೈ: ಜನತಾ ಕರ್ಫ್ಯೂ ದಿನದ ಚಪ್ಪಾಳೆ ಮತ್ತು ಶಂಖದ ಸದ್ದಿಗೆ ಕೊರೊನಾ ವೈರಾಣುವಿನ ಶಕ್ತಿಯೇ ನಾಶವಾಗಿದೆ ಎಂದು ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಮಾಡಿದ ಟ್ವೀಟ್‌ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಅಂದು ಅಮವಾಸ್ಯೆಯಾಗಿರುವುದು ಹೀಗೆ ವೈರಸ್‌ ನಾಶವಾಗಲು ಇನ್ನೊಂದು ಕಾರಣ ಎಂದು ಬಚ್ಚನ್‌ ಟ್ವೀಟ್‌ ಮಾಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟ ಜನತಾ ಕರ್ಫ್ಯೂ ವಿಷಯದಲ್ಲಿ ಇಂತಹ ಹಲವು ಸುಳ್ಳು ಸುದ್ದಿಗಳು ಹರಿದಾಡಿದ್ದವು. ಬಚ್ಚನ್‌ ಕೂಡ ಅದಕ್ಕೆ ಸೇರ್ಪಡೆಯಾಗಿದ್ದರು.ಬಳಿಕ ಈ ಟ್ವೀಟ್‌ ಅನ್ನು ಅವರು ಅಳಿಸಿಹಾಕಿದ್ದಾರೆ.

ಟ್ವೀಟ್‌ ಜತೆಗೆ ಅವರು ಮೂರು ಪ್ರಶ್ನಾರ್ಥಕ ಚಿಹ್ನೆಯನ್ನೂ ಹಾಕಿದ್ದರು. ಹಾಗಾಗಿ, ಬಚ್ಚನ್‌ ಅವರು ತಮ್ಮ ಅಭಿಪ್ರಾಯ ಹೇಳಿದ್ದರೇ ಅಥವಾ ಅಂತಹ ಅಭಿಪ್ರಾಯವನ್ನು ಪ್ರಶ್ನಿಸಿದ್ದರೇ ಎಂಬುದು ಸ್ಪಷ್ಟವಿಲ್ಲ.‘ಚಪ್ಪಾಳೆ ಸದ್ದಿಗೆ ವೈರಾಣು ನಾಶ ಆಗುವುದಿಲ್ಲ’ ಎಂದು ಕೇಂದ್ರ ಮಾಧ್ಯಮ ಮಾಹಿತಿ ಬ್ಯೂರೊ ಕೂಡ ಭಾನುವಾರವೇ ಹೇಳಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.