ADVERTISEMENT

ಅನಿಲ ಸೋರಿಕೆ: ₹ 5.92 ಕೋಟಿ ಪರಿಹಾರ ನೀಡಲು ಒಪ್ಪಿದ ಸಿಐಎಲ್‌ ಕಂಪನಿ

ಪಿಟಿಐ
Published 21 ಫೆಬ್ರುವರಿ 2024, 14:39 IST
Last Updated 21 ಫೆಬ್ರುವರಿ 2024, 14:39 IST
<div class="paragraphs"><p>ಅನಿಲ ಸೋರಿಕೆ (ಪ್ರಾತಿನಿಧಿಕ ಚಿತ್ರ)</p></div>

ಅನಿಲ ಸೋರಿಕೆ (ಪ್ರಾತಿನಿಧಿಕ ಚಿತ್ರ)

   

ಚೆನ್ನೈ: ಚೆನ್ನೈನ ಎನ್ನೋರ್‌‌ ಬಳಿ ನಡೆದಿದ್ದ ಅಮೋನಿಯಾ ಅನಿಲ ಸೋರಿಕೆ ಪ್ರಕರಣದಲ್ಲಿ ಪರಿಸರ ಹಾನಿಗೆ ಕಾರಣವಾದ ರಸಗೊಬ್ಬರ ಉತ್ಪಾದನಾ ಕಂಪನಿಯು ₹5.92 ಕೋಟಿ ಪರಿಹಾರ ನೀಡಲು ಒಪ್ಪಿಕೊಂಡಿದೆ ಎಂದು ತಮಿಳುನಾಡಿನ ಪರಿಸರ ಮತ್ತು ಹವಾಮಾನ ಬದಲಾವಣೆ ಇಲಾಖೆಯ ಸಚಿವ ಶಿವ.ವಿ.ಮೆಯ್ಯನಾಥನ್ ಅವರು ಬುಧವಾರ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಮೆಯ್ಯನಾಥನ್‌,  ‘ಕೋರಮಂಡಲ್ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ (ಸಿಐಎಲ್‌) ಕಂಪನಿಯು ತಮಿಳುನಾಡಿನ ಮಾಲಿನ್ಯ ನಿಯಂತ್ರಣ ಮಂಡಳಿಯ(ಟಿಎನ್‌ಪಿಸಿಬಿ) ನಿಯಮಗಳು ಮತ್ತು ತಾಂತ್ರಿಕ ಸಮಿತಿಯ ಸಲಹೆಯಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಿದ ಬಳಿಕ ಸರ್ಕಾರ ಮುಂದಿನ ಕ್ರಮಗಳನ್ನು ಕೈಗೊಳ್ಳಲಿದೆ’ ಎಂದರು.

ADVERTISEMENT

ಅನಿಲ ಸೋರಿಕೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ವಿರೋಧ ಪಕ್ಷಗಳು ಗೊತ್ತುವಳಿ ಮಂಡಿಸಿದ ಹಿನ್ನೆಲೆ ಮಾಹಿತಿ ನೀಡಿದ ಸಚಿವರು, ‘7 ಜನರ ತಾಂತ್ರಿಕ ಸಮಿತಿಯು ವರದಿ ಸಲ್ಲಿಸಿದ ಬಳಿಕ‌, ಟಿಎನ್‌ಪಿಸಿಬಿಯು ಫೆಬ್ರವರಿ 2ರಂದು ಸಿಐಎಲ್‌ ಕಂಪನಿಗೆ ನೋಟಿಸ್‌ ಜಾರಿ ಮಾಡಿತ್ತು. ಕಂಪನಿಯು ಪರಿಹಾರವನ್ನು ನೀಡಲು ಒಪ್ಪಿಕೊಂಡಿದೆ’ ಎಂದು ತಿಳಿಸಿದರು.

2023 ಡಿಸೆಂಬರ್‌ 26ರಂದು ಸಿಐಎಲ್‌ ಕಾರ್ಖಾನೆಗೆ ಅಮೋನಿಯಾ ಪೂರೈಕೆಯಾಗುತ್ತಿದ್ದ ಪೈಪ್‌ನಲ್ಲಿ ಸೋರಿಕೆ ಸಂಭವಿಸಿತ್ತು. ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯಾಪಕವಾಗಿ ಅಮೋನಿಯ ಹರಡಿ, ಜನ ಆಸ್ಪತ್ರೆ ಸೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.