ನವದೆಹಲಿ: ಮೊಘಲ್ ಗಾರ್ಡನ್ ಮರುನಾಮಕರಣ ನಿರ್ಧಾರವನ್ನು ವಿರೋಧ ಪಕ್ಷಗಳು ಟೀಕಿಸಿವೆ.
‘ಭಾರತದ ಇತಿಹಾಸವನ್ನು ಪುನರ್ ರಚಿಸುವುದು ಹಾಗೂ ರಾಷ್ಟ್ರೀಯತೆಯನ್ನು ಪುನರ್ ವ್ಯಾಖ್ಯಾನಿಸುವುದು ಆರ್‌ಎಸ್‌ಎಸ್ ಸಿದ್ಧಾಂತ. ಭಾರತವು ಪ್ರಜಾಪ್ರಭುತ್ವ ರಾಷ್ಟ್ರವೇ ಹೊರತು ದೇವಪ್ರಭುತ್ವದ ದೇಶವಲ್ಲ’ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಟೀಕಿಸಿದ್ದಾರೆ.
‘ಮುಂದೊಂದು ದಿನ ಕೋಲ್ಕತ್ತದ ಈಡನ್ ಗಾರ್ಡನ್ಸ್‌ಗೆ ಮೋದಿ ಗಾರ್ಡನ್ಸ್ ಎಂದು ಮರುನಾಮಕರಣ ಮಾಡಬಹುದು. ಬಿಜೆಪಿಯವರು ಹೆಸರು ಬದಲಾವಣೆ ಕಾರ್ಯವನ್ನು ಕೈಬಿಟ್ಟು ಉದ್ಯೋಗ ಸೃಷ್ಟಿಯತ್ತ ಚಿತ್ತ ಹರಿಸಲಿ’ ಎಂದು ಟಿಎಂಸಿ ರಾಜ್ಯಸಭಾ ಸದಸ್ಯ ಡೆರೆಕ್ ಒಬ್ರಿಯಾನ್ ಹೇಳಿದ್ದಾರೆ.
ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ ಮತ್ತು ಕಿರಣ್ ರಿಜಿಜು ಅವರು ಮರುನಾಮಕರಣದ ನಿಲುವನ್ನು ಸ್ವಾಗತಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.