ಚಂಡೀಗಢ: ಪ್ರತ್ಯೇಕ ಖಾಲಿಸ್ತಾನ ರಾಷ್ಟ್ರ ಪ್ರತಿಪಾದಕ ಮತ್ತು ಸಿಖ್ ಮೂಲಭೂತವಾದಿ ಅಮೃತ್‌ಪಾಲ್ ಸಿಂಗ್ ಅವರನ್ನು ಪೊಲೀಸರು ಅಕ್ರಮ ಬಂಧನದಲ್ಲಿರಿಸಿದ್ದಾರೆಂದು ದೂರಿ ಮಾರ್ಚ್ 19ರಂದು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
‘ಅಮೃತ್‌ಪಾಲ್ ಅವರನ್ನು ಪಂಜಾಬ್‌ನ ರೋಡೆ ಗ್ರಾಮದಲ್ಲಿ ಬಂಧಿಸಿದ ಮರುದಿನವೇ ಹೇಬಿಯಸ್ ಕಾರ್ಪಸ್ ಅರ್ಜಿ ಇನ್ನು ನಿರರ್ಥಕವೆಂದು ಹೈಕೋರ್ಟ್ ವಜಾಗೊಳಿಸಿದೆ. ಅಮೃತ್ ಪಾಲ್ ಪರ ಅವರ ವಕೀಲ ಇಮಾನ್ ಸಿಂಗ್ ಖಾರಾ ಈ ಅರ್ಜಿ ಸಲ್ಲಿಸಿದ್ದರು. ಸಿಂಗ್ ಪತ್ನಿ ಕೂಡ ಇದೇ ರೀತಿ ದೂರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.