ಮುಂಬೈ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಅವರ ಪತ್ನಿ ಅಮೃತಾ ಅವರಿಗೆ ಲಂಚದ ಆಮಿಷ ಒಡ್ಡಿದ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಬುಕ್ಕಿ ಅನಿಲ್ ಜೈಸಿಂಘಾನಿ ಎಂಬಾತನನ್ನು ಗುಜರಾತ್‌ನಲ್ಲಿ ಬಂಧಿಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಸಿಂಘಾನಿ ಪುತ್ರಿ ಅನಿಷ್ಕಾಳನ್ನು ಮುಂಬೈ ಪೊಲೀಸರು ಕೆಲ ದಿನಗಳ ಹಿಂದಷ್ಟೇ ಬಂಧಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನಿಲ್ ಜೈಸಿಂಘಾನಿ ವಿರುದ್ಧದ ಸುಮಾರು 14–15 ಪ್ರಕರಣಗಳು ಇತ್ಯರ್ಥವಾಗಬೇಕಿದೆ. ಆತನನ್ನು ಗುಜರಾತ್‌ನಲ್ಲಿ ಬಂಧಿಸಲಾಗಿದೆ ಎಂದು ಅಪರಾಧ ವಿಭಾಗದ ಪೊಲೀಸರು ಖಚಿತಪಡಿಸಿದ್ದಾರೆ. ಆದರೆ, ಹೆಚ್ಚಿನ ವಿವರ ನೀಡಿಲ್ಲ.
ವಸ್ತ್ರ ವಿನ್ಯಾಸಕಿಯಾಗಿರುವ ಅನಿಷ್ಕಾ, ಕ್ರಿಮಿನಲ್ ಪ್ರಕರಣವೊಂದರಲ್ಲಿ ನೆರವಾಗುವಂತೆ ತಮಗೆ ಲಂಚದ ಆಮಿಷ ಒಡ್ಡಿ, ಪರೋಕ್ಷವಾಗಿ ಬೆದರಿಕೆ ಹಾಕಿದ್ದಾಳೆ ಎಂದು ಆರೋಪಿಸಿ ಅಮೃತಾ ಫಡಣವಿಸ್ ಅವರು ಮಲಬಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅನಿಷ್ಕಾಳನ್ನು ಮಾರ್ಚ್ 17ರಂದು ಬಂಧಿಸಲಾಗಿದೆ.
ಇವನ್ನೂ ಓದಿ
* ಫಡಣವೀಸ್ ಪತ್ನಿಗೆ ಲಂಚದ ಆಮಿಷ: ವಸ್ತ್ರ ವಿನ್ಯಾಸಕಿ ಬಂಧನ
* ಫಡಣವೀಸ್ ಪತ್ನಿಗೆ ಲಂಚದ ಆಮಿಷ: ವಸ್ತ್ರ ವಿನ್ಯಾಸಕಿ ವಿರುದ್ಧ ಎಫ್ಐಆರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.