ADVERTISEMENT

ವಿನ್ಯಾಸಕಿ ವಿರುದ್ಧ ಪ್ರಕರಣ ದಾಖಲಿಸಿದ ಅಮೃತ ಫಡಣವೀಸ್

ಪಿಟಿಐ
Published 16 ಮಾರ್ಚ್ 2023, 10:28 IST
Last Updated 16 ಮಾರ್ಚ್ 2023, 10:28 IST
ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ಪತ್ನಿ ಅಮೃತ -ಕಡತ ಚಿತ್ರ
ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ಪತ್ನಿ ಅಮೃತ -ಕಡತ ಚಿತ್ರ   

ಮುಂಬೈ: ಕ್ರಿಮಿನಲ್ ಪ್ರಕರಣವೊಂದನ್ನು ಇತ್ಯರ್ಥಪಡಿಸಲು ಹಣದ ಆಮಿಷ ಮತ್ತು ಬೆದರಿಕೆ ಹಾಕಿದ ಆರೋಪದಡಿ ಡಿನೈಸರ್ ಒಬ್ಬರ ವಿರುದ್ಧ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಪತ್ನಿ ಅಮೃತಾ ಫಡಣವೀಸ್ ಅವರು ಮಲಬಾರ್‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಅಮೃತಾ ನೀಡಿದ ದೂರಿನ ಆಧಾರದ ಮೇಲೆ ಅನಿಕ್ಷಾ ಎಂಬ ಮಹಿಳೆ ಮತ್ತು ಆಕೆಯ ತಂದೆ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

16 ತಿಂಗಳಿನಿಂದ ಅಮೃತಾ ಸಂಪರ್ಕದಲ್ಲಿರುವ ಅನಿಕ್ಷಾ ಆಗಾಗ್ಗೆ ಅವರ ಮನೆಗೂ ಭೇಟಿ ನೀಡಿದ್ದರು ಎಂದೂ ಅವರು ಹೇಳಿದ್ದಾರೆ.

ADVERTISEMENT

2021ರ ನವೆಂಬರ್ ತಿಂಗಳಲ್ಲಿ ಅಮೃತಾ ಅವರನ್ನು ಭೇಟಿಯಾಗಿದ್ದ ಅನಿಕ್ಷಾ, ತಾವೊಬ್ಬ ವಸ್ತ್ರ, ಆಭರಣ ಮತ್ತು ಪಾದರಕ್ಷೆ ವಿನ್ಯಾಸಕಿ ಎಂದು ಪರಿಚಯಿಸಿಕೊಂಡಿದ್ದರು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಮ್ಮ ವಸ್ತುಗಳನ್ನು ಧರಿಸಿದರೆ ಪ್ರಚಾರ ಸಿಗುತ್ತದೆ ಎಂದು ಕೇಳಿಕೊಂಡಿದ್ದರು ಎಂದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಮಲಬಾರ್ ಹಿಲ್ಸ್ ಠಾಣೆಯ ಪೊಲೀಸರು ಹೇಳಿದ್ದಾರೆ.

ಅಮೃತ ಅವರ ನಂಬಿಕೆ ಗಳಿಸಿಕೊಂಡ ನಂತರ ನಿಧಾನವಾಗಿ ಅನಿಕ್ಷಾ ಕೆಲವು ಬುಕ್ಕಿಗಳ ಮಾಹಿತಿಕೊಡಲು ಶುರುಮಾಡಿದರು. ಈ ಮೂಲಕ ನಾವು ಹಣ ಗಳಿಸಬಹುದು ಎಂಬುದು ಅವರ ಉದ್ದೇಶವಾಗಿತ್ತು. ಜತೆಗೆ ಅಪರಾಧ ಪ್ರಕರಣವೊಂದರಲ್ಲಿ ಸಿಕ್ಕಿಹಾಕಿಕೊಂಡಿದ್ದ ತಮ್ಮ ತಂದೆಯನ್ನು ಬಿಡಿಸುವ ಸಲುವಾಗಿ ಅನಿಕ್ಷಾ ₹ 1 ಕೋಟಿ ಹಣದ ಆಮಿಷ ಒಡ್ಡಿದ್ದರು ಎಂದು ಅಮೃತಾ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

’ಅನಿಕ್ಷಾ ಅವರ ವರ್ತನೆ ಸರಿಯಿಲ್ಲ. ಆಕೆ ನನ್ನ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದಾಳೆ. ನಾನು ಮಾತನಾಡಿರುವ ಆಡಿಯೊ ಹಾಗೂ ವಿಡಿಯೊಗಳನ್ನು ಅನಾಮಿಕ ನಂಬರ್‌ನಿಂದ ಕಳುಹಿಸಿ ತನಗೆ ಬೆದರಿಕೆ ಒಡ್ಡುತ್ತಿದ್ದಾಳೆ. ಇದರಲ್ಲಿ ಅನಿಕ್ಷಾಳ ತಂದೆಯ ಪಾತ್ರವೂ ಇದೆ’ ಎಂದು ಅಮೃತ ಫಡಣವೀಸ್ ಅವರು ದೂರಿನಲ್ಲಿ ಹೇಳಿದ್ದಾರೆ ಎಂದು ಪೊಲೀಸ್‌ ಅಧಿಕಾರಿ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.