ADVERTISEMENT

ಅಮೆರಿಕ ಮಾರುಕಟ್ಟೆಗೆ ಅಮುಲ್‌ ತಾಜಾ ಹಾಲು

ಪಿಟಿಐ
Published 25 ಮಾರ್ಚ್ 2024, 10:55 IST
Last Updated 25 ಮಾರ್ಚ್ 2024, 10:55 IST
   

ನವದೆಹಲಿ: ಇದೇ ಮೊದಲ ಬಾರಿಗೆ ಅಮುಲ್‌ ತಾಜಾ ಹಾಲನ್ನು ವಿದೇಶಿ ಮಾರುಕಟ್ಟೆಯಲ್ಲಿ ಪರಿಚಯಿಸಲು ಕಂಪನಿ ಮುಂದಾಗಿದೆ.

ಅಮೆರಿಕದ ಮಾರುಕಟ್ಟೆಗೆ ಒಂದು ವಾರದೊಳಗೆ ನಾಲ್ಕು ವಿಧವಾದ ತಾಜಾ ಹಾಲನ್ನು ರಫ್ತು ಮಾಡಲು ಗುಜರಾತ್‌ ಕೋ ಆಪರೇಟಿವ್‌ ಮಿಲ್ಕ್‌ ಮಾರ್ಕೆಟಿಂಗ್‌ ಫೆಡರೇಶನ್‌ (ಜಿಸಿಎಂಎಂಎಫ್‌) ನಿರ್ಧರಿಸಿದೆ.

‘ಹಲವು ದಶಕಗಳಿಂದ ವಿದೇಶಿ ಮರುಕಟ್ಟೆಗಳಿಗೆ ಹಾಲಿನ ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದೇವೆ. ಇದೇ ಮೊದಲ ಬಾರಿಗೆ ತಾಜಾ ಹಾಲನ್ನು ರಫ್ತು ಮಾಡಲು ಯೋಜಿಸಿದ್ದೇವೆ. ಅದಕ್ಕಾಗಿ 108 ವರ್ಷದ ಹಳೆಯ ಸ್ವಸಹಾಯ ಸಂಸ್ಥೆಯಾದ ‘ಮಿಚಿಗನ್‌ ಮಿಲ್ಕ್‌ ಪ್ರೊಡ್ಯೂಸರ್ಸ್‌ ಅಸೋಸಿಯೇಶನ್‌’ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ’ ಎಂದು ಜಿಸಿಎಂಎಂಎಫ್‌ನ ಎಂಡಿ ಜಯೆನ್‌ ಮೆಹ್ತಾ ಪಿಟಿಐಗೆ ತಿಳಿಸಿದ್ದಾರೆ.

ADVERTISEMENT

ಮಿಚಿಗನ್‌ ಸಂಸ್ಥೆ ಹಾಲಿನ ಕ್ರೋಢೀಕರಣ ಮತ್ತು ಸಂಸ್ಕರಣೆಯನ್ನು ಮಾಡಲಿದೆ. ನಾವು ಅಮುಲ್‌ ತಾಜಾ ಹಾಲಿನ ಮಾರ್ಕೆಟಿಂಗ್‌ ಮತ್ತು ಬ್ರಾಂಡಿಂಗ್‌ ಮಾಡಲಿದ್ದೇವೆ. ‘ಅಮುಲ್‌ ತಾಜಾ’, ‘ಅಮುಲ್‌ ಗೋಲ್ಡ್‌’, ‘ಅಮುಲ್‌ ಶಕ್ತಿ’ ಮತ್ತು ‘ಅಮುಲ್‌ ಸ್ಲಿಮ್‌ ಆ್ಯಂಡ್‌ ಟ್ರಿಂಮ್‌’ ಹೆಸರಿನ ಹಾಲನ್ನು ರಫ್ತು ಮಾಡುತ್ತಿದ್ದೇವೆ. ಒಂದು ವಾರದಲ್ಲಿ ಅಮೆರಿಕದ ನ್ಯೂಯಾರ್ಕ್‌, ನ್ಯೂಜೆರ್ಸಿ, ಚಿಕಾಗೊ, ವಾಷಿಂಗ್ಟನ್‌, ಡಲಾಸ್‌ ಮತ್ತು ಟೆಕ್ಸಾಸ್‌ ನಗರಗಳ ಮಾರುಕಟ್ಟೆಗಳಲ್ಲಿ ಹಾಲು ದೊರೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.