ADVERTISEMENT

ಶ್ರೀನಗರ: ಉಗ್ರರ ನಿಗ್ರಹ ಕಾರ್ಯಾಚರಣೆ ಚುರುಕು

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2024, 16:23 IST
Last Updated 11 ಆಗಸ್ಟ್ 2024, 16:23 IST
<div class="paragraphs"><p>ಉಗ್ರರ ನಿಗ್ರಹಕ್ಕಾಗಿ ಜಮ್ಮು–ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸುತ್ತಿರುವ ಕಾರ್ಯಾಚರಣೆ ಭಾನುವಾರವೂ ಮುಂದುವರಿಯಿತು</p></div>

ಉಗ್ರರ ನಿಗ್ರಹಕ್ಕಾಗಿ ಜಮ್ಮು–ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸುತ್ತಿರುವ ಕಾರ್ಯಾಚರಣೆ ಭಾನುವಾರವೂ ಮುಂದುವರಿಯಿತು

   

–ಪಿಟಿಐ ಚಿತ್ರ 

ಶ್ರೀನಗರ: ಜಮ್ಮು–ಕಾಶ್ಮೀರದ ಅನಂತನಾಗ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಆರಂಭಿಸಿರುವ ಉಗ್ರರ ನಿಗ್ರಹ ಕಾರ್ಯಾಚರಣೆಯನ್ನು ಭಾನುವಾರ ಚುರುಕುಗೊಳಿಸಲಾಯಿತು.

ADVERTISEMENT

‘ಗಾಗರ್‌ಮಂಡು ಪ್ರದೇಶದಲ್ಲಿ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ. ಶನಿವಾರ ನಡೆದ ಕಾರ್ಯಾಚರಣೆ ವೇಳೆ ಮೂವರು ಯೋಧರು ಹಾಗೂ ಇಬ್ಬರು ನಾಗರಿಕರು ಗಾಯಗೊಂಡಿದ್ದರು. ಇಬ್ಬರು ಯೋಧರು ಹುತಾತ್ಮರಾಗಿದ್ದರೆ, ಒಬ್ಬ ನಾಗರಿಕ ಮೃತಪಟ್ಟಿದ್ಧಾರೆ. ಗಾಯಗೊಂಡಿರುವ ಯೋಧ ಮತ್ತು ಮತ್ತೊಬ್ಬ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಐಜಿಪಿ (ಕಾಶ್ಮೀರ ವಲಯ) ವಿ.ಕೆ.ಬಿರ್ಡಿ ಹೇಳಿದ್ದಾರೆ.

‘ಈ ಇಬ್ಬರು ನಾಗರಿಕರು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ್ದರೆ’ ಎಂಬ ಪತ್ರಕರ್ತರ ಪ್ರಶ್ನೆಗೆ, ‘ಎನ್‌ಕೌಂಟರ್‌ ನಡೆಯುತ್ತಿರುವ ಸ್ಥಳದ ಸಮೀಪವೇ ಈ ಇಬ್ಬರು ಇದ್ದರು. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಬಿರ್ಡಿ ಉತ್ತರಿಸಿದರು.

‘ಪಾಕ್‌ ಕೈವಾಡ’: ವಿದೇಶಗಳಲ್ಲಿ ತರಬೇತಿ ಹೊಂದಿದ ಉಗ್ರರನ್ನು ಪಾಕಿಸ್ತಾನ ಜಮ್ಮು–ಕಾಶ್ಮೀರದೊಳಗೆ ಕಳುಹಿಸುತ್ತಿದ್ದು, ಆ ಮೂಲಕ ಕಣಿವೆಯಲ್ಲಿನ ಭದ್ರತಾ ವ್ಯವಸ್ಥೆಯನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ ಎಂದು ಲೆಫ್ಟಿನೆಂಟ್‌ ಗವರ್ನರ್ ಮನೋಜ್ ಸಿನ್ಹಾ ಭಾನುವಾರ ಹೇಳಿದ್ದಾರೆ.

‘ನೆರೆ ರಾಷ್ಟ್ರದ ದುಷ್ಕೃತ್ಯಗಳನ್ನು ಮಟ್ಟಹಾಕುವುದಕ್ಕೆ ಕಾರ್ಯತಂತ್ರ ರೂಪಿಸಲಾಗಿದೆ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.