ಶ್ರೀನಗರ: ಜಮ್ಮು ಕಾಶ್ಮೀರದ ಖಿರಾಂ ಶ್ರೀಗುಫಾರದಲ್ಲಿ ಶುಕ್ರವಾರ ಬೆಳಗ್ಗೆ ನಡೆದ ಎನ್‍ಕೌಂಟರ್‍ನಲ್ಲಿ ನಾಲ್ವರು ಉಗ್ರರು ಬಲಿಯಾಗಿದ್ದಾರೆ.ಉಗ್ರರ ವಿರುದ್ಧ ರಕ್ಷಣಾ ಪಡೆ ಕಾರ್ಯಾಚರಣೆ ನಡೆಸಿದ್ದು ಗುಂಡಿನ ಚಕಮಕಿಯಲ್ಲಿ ಜಮ್ಮು ಕಾಶ್ಮೀರ ಪೊಲೀಸ್ ವಿಶೇಷ ಕಾರ್ಯಾಚರಣೆ ತಂಡದ ಓರ್ವ ಸಿಬ್ಬಂದಿ ಹುತಾತ್ಮರಾಗಿದ್ದುಮತ್ತು ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ.
ಉಗ್ರರು ಇಸ್ಲಾಮಿಕ್ ಸ್ಟೇಟ್ ಜಮ್ಮು ಕಾಶ್ಮೀರ್ (ಐಎಸ್‍ಜೆಕೆ) ಸಂಘಟನೆಯ ಸದಸ್ಯರಾಗಿದ್ದಾರೆ ಎಂದು ಡಿಜಿಪಿ ಶೇಶ್ ಪೌಲ್ ವೈದ್ ಹೇಳಿದ್ದಾರೆ.
ಐಎಸ್‌ಜಿಕೆ ಮುಖಂಡ ಅಹಮದ್ ಸೋಫಿ ಅಲಿಯಾಸ್ ಧನೀಷ್ ಈ ಎನ್‍ಕೌಂಟರ್‍ನಲ್ಲಿ ಹತ್ಯೆಯಾಗಿರಬಹುದೆಂದು ವೈದ್ ಹೇಳಿದ್ದಾರೆ. ಗುಂಡಿನ ಚಕಮಕಿ ವೇಳೆ ಮೂವರು ನಾಗರಿಕರಿಗೆ ಗಾಯವಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಖಿರಾಂ ಶ್ರೀಗುಫಾರದಲ್ಲಿ ಎನ್‍ಕೌಂಟರ್ ಮುಂದುವರಿದೆ.ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ.ದುರದೃಷ್ಟವಶಾತ್ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಪಡೆಯ ಓರ್ವ ಸಿಬ್ಬಂದಿಯನ್ನು ನಾವು ಕಳೆದುಕೊಂಡಿದ್ದೇವೆ.ಉಗ್ರರು ಐಎಸ್‍ಜೆಕೆ ಸಂಘಟನೆಯವರು ಎಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ಶೇಶ್ ಪೌಲ್ ವೈದ್ ಟ್ವೀಟ್ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.