ಹೈದರಾಬಾದ್:ಅತ್ಯಾಚಾರಿಗೆ 21 ದಿನದಲ್ಲಿ ಮರಣದಂಡನೆ ವಿಧಿಸುವ ದಿಶಾ ಮಸೂದೆ 2019ಗೆ(ಆಂಧ್ರ ಪ್ರದೇಶ ಅಪರಾಧ ಕಾನೂನು ತಿದ್ದುಪಡಿ ಕಾಯ್ದೆ 2019) ಆಂಧ್ರ ಪ್ರದೇಶ ಸದನದಲ್ಲಿ ಶುಕ್ರವಾರ ಅಂಗೀಕಾರ ಲಭಿಸಿದೆ.
ಆಂಧ್ರ ಪ್ರದೇಶ ದಿಶಾ ಕಾಯ್ದೆ ಪ್ರಕಾರ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ದೂರು ದಾಖಲಾದ ಏಳು ದಿನಗಳಲ್ಲಿ ಪೊಲೀಸರು ತನಿಖೆ ಪೂರ್ಣಗೊಳಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ಬಳಿಕ ನ್ಯಾಯಾಲಯ 14 ದಿನಗಳೊಳಗೆ ವಿಚಾರಣೆ ಪೂರ್ಣಗೊಳಿಸಿ ಆರೋಪಿಗೆ ಶಿಕ್ಷೆ ವಿಧಿಸಬೇಕು. ಒಟ್ಟು 21 ದಿನಗಳ ಒಳಗೆ ಪ್ರಕರಣ ಇತ್ಯರ್ಥವಾಗಬೇಕು.
ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ವಿರುದ್ಧ ಕಾನೂನು ಬಿಗಿಗೊಳಿಸುವ ನಿಟ್ಟಿನಲ್ಲಿ ಆಂಧ್ರ ಪ್ರದೇಶ ಈ ಹಿಂದೆ ಎರಡು ಮಸೂದೆಗಳಿಗೆ ಅಂಗೀಕಾರ ನೀಡಿತ್ತು.
ದೌರ್ಜನ್ಯ ಪ್ರಕರಣಗಳ ತ್ವರಿತ ಇತ್ಯರ್ಥಕ್ಕಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು ‘ಆಂಧ್ರ ಪ್ರದೇಶ ವಿಶೇಷ ನ್ಯಾಯಾಲಯ 2019’ ಎಂಬ ಕಾಯ್ದೆಗೂ ಸದನದ ಅಂಗೀಕಾರ ದೊರೆತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.