ADVERTISEMENT

ಕೃಷ್ಣಾ ನದಿ ನೀರು ವಿವಾದ: ಆಂಧ್ರಪ್ರದೇಶ ಸಿಎಂ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ

ಪಿಟಿಐ
Published 10 ಅಕ್ಟೋಬರ್ 2023, 5:42 IST
Last Updated 10 ಅಕ್ಟೋಬರ್ 2023, 5:42 IST
ಜಗನ್‌ ಮೋಹನ್‌ ರೆಡ್ಡಿ
ಜಗನ್‌ ಮೋಹನ್‌ ರೆಡ್ಡಿ   

ಅಮರಾವತಿ: ಕೃಷ್ಣಾ ನದಿ ನೀರು ವಿವಾದ ಕುರಿತು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ. ಎಸ್‌ ಜಗನ್‌ ಮೋಹನ್‌ ರೆಡ್ಡಿ ಅವರು ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.

ಕೇಂದ್ರ ಸಚಿವ ಸಂಪುಟವು ಕೃಷ್ಣಾ ಜಲವಿವಾದ ನ್ಯಾಯಮಂಡಳಿ–2ಕ್ಕೆ ಉಲ್ಲೇಖದ ನಿಯಮಗಳನ್ನು ಹೊರಡಿಸಿದ ಹಿನ್ನೆಲೆಯಲ್ಲಿ ಸಿಎಂ ಈ ಸಭೆ ನಡೆಸಿದ್ದಾರೆ.

ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ -2ರ (ನ್ಯಾಯಮೂರ್ತಿ ಬ್ರಿಜೇಶ್ ಕುಮಾರ ನೇತೃತ್ವದ) ತೀರ್ಪಿನ‌ ಗೆಜೆಟ್ ನೋಟಿಫಿಕೇಶನ್‌ಗೆ ಕೇಂದ್ರ ಸರ್ಕಾರ ಷರತ್ತುಗಳನ್ನು ಹೊರಡಿಸಿದ ಬೆನ್ನಲ್ಲೇ ಸರ್ಕಾರವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲು ನಿರ್ಧರಿಸಿದೆ.

ADVERTISEMENT

ಈ ವಿಷಯದ ಕುರಿತು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಆಂಧ್ರ ಪ್ರದೇಶ ಸರ್ಕಾರವು ನಿರ್ಧರಿಸಿದ್ದು, ಉಲ್ಲೇಖದ ನಿಯಮಗಳು ಮತ್ತು ಗೆಜೆಟ್‌ ಬಿಡುಗಡೆಯ ಇತ್ತೀಚಿನ ಬೆಳವಣಿಗೆಗಳಿಂದ ರಾಜ್ಯಕ್ಕೆ ನಷ್ಟವಾಗಿದೆ ಎಂದು ತಿಳಿಸಿದೆ.

ಆಂಧ್ರಪ್ರದೇಶದ ಮರುಸಂಘಟನೆ ಕಾಯ್ದೆಯು ರಾಜ್ಯ ವಿಭಜನೆಗೂ ಮೊದಲು ಜಾರಿಗೆ ತಂದ ಕೃಷ್ಣಾ ನದಿ ನೀರು ಹಂಚಿಕೆಯ ವಿತರಣಾ ಯೋಜನೆಗೆ ಬದ್ಧವಾಗಿರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಷಯ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆಯುವುದು ಸೇರಿದಂತೆ, ಯಾವುದೇ ರಾಜಿ ಮಾಡಿಕೊಳ್ಳದೆ ರಾಜ್ಯದ ಹಿತಾಸಕ್ತಿಗಳನ್ನು ಕಾಪಾಡಲು ಕೆಲಸ ಮಾಡುವಂತೆ ಮುಖ್ಯಮಂತ್ರಿ ಜಗನ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.