ADVERTISEMENT

ಆಂಧ್ರ ಪ್ರದೇಶದಲ್ಲಿ 13 ಹೊಸ ಜಿಲ್ಲೆ ಅಸ್ತಿತ್ವಕ್ಕೆ: ಸರ್ಕಾರದಿಂದ ಘೋಷಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜನವರಿ 2022, 4:39 IST
Last Updated 27 ಜನವರಿ 2022, 4:39 IST
ಆಂಧ್ರ ಪ್ರದೇಶ ಸಿಎಂ ಜಗನ್‌ ಮೋಹನ್ ರೆಡ್ಡಿ
ಆಂಧ್ರ ಪ್ರದೇಶ ಸಿಎಂ ಜಗನ್‌ ಮೋಹನ್ ರೆಡ್ಡಿ    

ಬೆಂಗಳೂರು: ಆಡಳಿತ ಸುಧಾರಣೆಯ ಕ್ರಮವಾಗಿ ಆಂಧ್ರ ಪ್ರದೇಶದ ಸಿಎಂ ಜಗನ್‌ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಹೊಸದಾಗಿ 13 ಜಿಲ್ಲೆಗಳನ್ನು ರಚಿಸಿ ಅಧಿಸೂಚನೆ ಹೊರಡಿಸಿದೆ.

ಸರ್ಕಾರದ ಯೋಜನೆಗಳ ಸುಗಮ ಜಾರಿಗೆ ಮತ್ತು ಅಧಿಕಾರಿಗಳಿಗೆ ಅನುಕೂಲ ಕಲ್ಪಿಸಿ, ಜನರಿಗೆ ಸೌಲಭ್ಯ ಒದಗಿಸಲು ಪೂರಕವಾಗುವಂತೆ ಹೊಸ ಜಿಲ್ಲೆಗಳನ್ನು ರಚಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಹೊಸ ಜಿಲ್ಲೆಗಳ ಪೈಕಿ, ಎನ್‌ಟಿಆರ್ (ವಿಜಯವಾಡ), ಅಲ್ಲೂರಿ ಸೀತಾರಾಮ ರಾಜು (ಪಡೇರು), ಶ್ರೀ ಸತ್ಯಸಾಯಿ (ಪುಟ್ಟಪರ್ತಿ) ಅನ್ನಮಯ್ಯ (ರಾಯಚೋಟಿ) ಮತ್ತು ಶ್ರೀ ಬಾಲಾಜಿ (ತಿರುಪತಿ) ಕೂಡ ಸೇರಿವೆ.

ADVERTISEMENT

ತೆಲುಗು ಹೊಸ ವರ್ಷ ಯುಗಾದಿಯ ಬಳಿಕ ಹೊಸ ಜಿಲ್ಲೆಗಳು ಅಸ್ತಿತ್ವಕ್ಕೆ ಬಂದು ಕಾರ್ಯಾರಂಭ ಮಾಡಲಿವೆ ಎನ್ನಲಾಗಿದೆ.

ಹೊಸದಾಗಿ ಅಸ್ವಿತ್ತಕ್ಕೆ ಬಂದಿರುವ ಜಿಲ್ಲೆ ಸಹಿತ ಆಂಧ್ರ ಪ್ರದೇಶದಲ್ಲಿ ಒಟ್ಟು 26 ಜಿಲ್ಲೆಗಳು ಆದಂತಾಗುತ್ತದೆ.

ಹೊಸದಾಗಿ ಅಸ್ವಿತ್ತಕ್ಕೆ ಬಂದಿರುವ ಜಿಲ್ಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.