ಅಹಮದಾಬಾದ್: ರಫೇಲ್ ಒಪ್ಪಂದದ ಬಗ್ಗೆ ಕಾಂಗ್ರೆಸ್ ನೇತಾರರ ಮತ್ತು ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಿರುದ್ಧದ ಮಾನನಷ್ಟ ಮೊಕದ್ದಮೆಯನ್ನು ಹಿಂಪಡೆಯಲು ಅನಿಲ್ ಅಂಬಾನಿ ಅವರ ರಿಲಾಯನ್ಸ್ ಗ್ರೂಪ್ ತೀರ್ಮಾನಿಸಿದೆ.
ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ನ್ಯಾಷನಲ್ ಹೆರಾಲ್ಡ್ ವಿರುದ್ಧಅನಿಲ್ ಅಂಬಾನಿ ₹5,000 ಕೋಟಿಮೊತ್ತದಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಅಹಮದಾಬಾದ್‌ವ ಸಿಟಿ ಸಿವಿಲ್ ಆ್ಯಂಡ್ ಸೆಷನ್ಸ್ ನ್ಯಾಯಾಧೀಶ ಪಿ.ಜೆ. ತಮಕುವಾಲ ಅವರು ಈ ಕೇಸಿನ ವಿಚಾರಣೆ ನಡೆಸಿದ್ದಾರೆ.
ಕಾಂಗ್ರೆಸ್ ವಿರುದ್ಧವಿರುವ ಮೊಕದ್ದಮೆ ಹಿಂಪಡೆಯಲು ತೀರ್ಮಾನಿಸಿದ್ದೇವೆ ಎಂದು ನ್ಯಾಯವಾದಿ ರಾಕೇಶ್ ಪರೀಖ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ತಮ್ಮ ವಿರುದ್ಧವಿರುವ ಮಾನನಷ್ಟಮೊಕದ್ದಮೆಯನ್ನು ವಾಪಸ್ ಪಡೆಯುತ್ತಿದ್ದೇವೆ ಎಂದು ರಿಲಾಯನ್ಸ್ ಗ್ರೂಪ್ ನ್ಯಾಯವಾದಿಗಳು ಹೇಳಿರುವುದಾಗಿ ನ್ಯಾಷನಲ್ ಹೆರಾಲ್ಡ್ ಮತ್ತು ಇತರ ಪ್ರತಿವಾದಿಗಳ ಪರ ವಾದಿಸಿರುವ ನ್ಯಾಯವಾದಿ ಪಿ.ಎಸ್ ಚಂಪನೇರಿ ಹೇಳಿದ್ದಾರೆ.
ಬೇಸಿಗೆಕಾಲ ರಜಾ ಮುಗಿದು ನ್ಯಾಯಾಲಯದ ಕಾರ್ಯ ಪುನರಾರಂಭಗೊಂಡ ನಂತರವೇಈ ಪ್ರಕರಣ ಹಿಂಪಡೆಯುವ ಪ್ರಕ್ರಿಯೆ ನಡೆಯಲಿದೆ.
ಅನಿಲ್ ಅಂಬಾನಿ ಅವರ ಮಾಲೀಕತ್ವದಲ್ಲಿರುವ ರಿಲಾಯನ್ಸ್ ಗ್ರೂಪ್‌ಗೆ ಸೇರಿದ ರಿಲಾಯನ್ಸ್ ಡಿಫೆನ್ಸ್, ರಿಲಾಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಮತ್ತು ರಿಲಾಯನ್ಸ್ ಏರೋಸ್ಟ್ರಕ್ಚರ್ ಕಾಂಗ್ರೆಸ್ ನಾಯಕರಾದ ಸುನಿಲ್ ಝಕಾರ್, ರಣದೀಪ್ ಸಿಂಗ್ ಸುರ್ಜೇವಾಲಾ, ಉಮ್ಮನ್ ಚಾಂಡಿ, ಅಶೋಕ್ ಚೌಹಾಣ್, ಅಭಿಷೇಕ್ ಮನು ಸಾಂಘ್ವಿ, ಸಂಜಯ್ ನಿರುಪಮ್, ಶಕ್ತಿ ಸಿನ್ಹ ಗೋಹಿಲ್ ಮತ್ತು ನ್ಯಾಷನಲ್ ಹೆಪಾಲ್ಡ್ ಪತ್ರಿಕೆಯ ಕೆಲವು ಪತ್ರಕರ್ತರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ನ್ಯಾಷನಲ್ ಹೆರಾಲ್ಡ್ ಸಂಪಾದಕ ಜಾಫರ್ ಆಘಾ ಮತ್ತು ಆ ಸುದ್ದಿ ಬರೆದಿದ್ದ ಪತ್ರಕರ್ತ ವಿಶ್ವದೀಪಕ್ ವಿರುದ್ಧವೂ ಕೇಸು ದಾಖಲಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.