ADVERTISEMENT

ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇನೆ: ಅನಿಲ್‌ ದೇಶಮುಖ್‌

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 16:01 IST
Last Updated 19 ನವೆಂಬರ್ 2024, 16:01 IST
ನಾಗರಪುರದಲ್ಲಿ ಕಲ್ಲು ತೂರಾಟದಿಂದ ಗಾಯಗೊಂಡ ಅನಿಲ್‌ ದೇಶಮುಖ್‌ ಅವರು ಮಂಗಳವಾರ ಆಸ್ಪತ್ರೆಯಿಂದ ಮನೆಗೆ ಮರಳಿದರು.
ನಾಗರಪುರದಲ್ಲಿ ಕಲ್ಲು ತೂರಾಟದಿಂದ ಗಾಯಗೊಂಡ ಅನಿಲ್‌ ದೇಶಮುಖ್‌ ಅವರು ಮಂಗಳವಾರ ಆಸ್ಪತ್ರೆಯಿಂದ ಮನೆಗೆ ಮರಳಿದರು.   

ಮುಂಬೈ: ನಾಗ್ಪುರದಲ್ಲಿ ಕಲ್ಲು ತೂರಾಟದಿಂದ ಗಾಯಗೊಂಡ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್‌ ಅವರು ಬಿಜೆಪಿಗೆ ತಕ್ಕ ಪಾಠ ಕಲಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಕಲ್ಲು ತೂರಾಟ ಘಟನೆಯನ್ನು ಎನ್‌ಸಿಪಿಯ (ಎಸ್‌ಪಿ) ರಾಜಕೀಯ ಗಿಮಿಕ್‌ ಎಂದು ಬಿಜೆಪಿ ಹೇಳಿದೆ. ಶರದ್‌ ಪವಾರ್‌ ಅವರ ಎನ್‌ಸಿಪಿ (ಎಸ್‌ಪಿ) ಪಕ್ಷದ ಹಿರಿಯ ನಾಯಕರಾದ ದೇಶಮುಖ್‌ ತಾವು ಪ್ರತಿನಿಧಿಸುತ್ತಿದ್ದ ಕಾಟೋಲ್‌ ಕ್ಷೇತ್ರದಿಂದ ತಮ್ಮ ಪುತ್ರ ಸಲೀಲ್‌ ದೇಶಮುಖ್‌ ಅವರನ್ನು ಕಣಕ್ಕಿಳಿಸುತ್ತಿದ್ದಾರೆ.

ನಾಗ್ಪುರ ಜಿಲ್ಲೆಯ ಕಾಟೋಲ್‌–ಜಲಾಲ್‌ಖೇಡ ರಸ್ತೆಯಲ್ಲಿ ನಡೆದಿದೆ ಎನ್ನಲಾದ ಕಲ್ಲು ತೂರಾಟದಲ್ಲಿ ದೇಶಮುಖ್‌ ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ADVERTISEMENT

ಪೊಲೀಸರು ಘಟನೆ ಸಂಬಂಧ ನಾಲ್ವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ. ಘಟನೆಯನ್ನು ರಾಜಕೀಯ ಗಿಮಿಕ್‌ ಎಂದು ಬಿಜೆಪಿ ಕರೆದರೆ ಎನ್‌ಸಿಪಿಯ (ಎಸ್‌ಪಿ) ನಾಯಕರು ಘಟನೆಯನ್ನು ಖಂಡಿಸಿದ್ದಾರೆ.   

ದೇಶಮುಖ್‌ ಪುತ್ರ ಸಾಲಿಲ್‌ ವಿರುದ್ಧ ಬಿಜೆಪಿಯ ಬಾಬುಲಾಲ್‌ಜಿ ಠಾಕೂರ್‌ ಸ್ಪರ್ಧಿಸುತ್ತಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.