ADVERTISEMENT

ಅಲಿಗಢ: ಲಸಿಕೆ ತುಂಬಿದ ಸಿರಿಂಜುಗಳು ಕಸದ ಬುಟ್ಟಿಗೆ- ದಾದಿ ವಿರುದ್ಧ ಕೇಸ್

​ಪ್ರಜಾವಾಣಿ ವಾರ್ತೆ
Published 31 ಮೇ 2021, 16:15 IST
Last Updated 31 ಮೇ 2021, 16:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ಕೋವಿಡ್ ಲಸಿಕೆ ತುಂಬಿದ ಸಿರಿಂಜುಗಳನ್ನು ಫಲಾನುಭವಿಗಳಿಗೆ ಇಂಜೆಕ್ಟ್ ಮಾಡದೆ ಕಸದ ಬುಟ್ಟಿಗೆ ಎಸೆಯುತ್ತಿದ್ದ ಆರೋಪದಡಿ ಅಲಿಗಢ ಪ್ರಾಥಮಿಕ ಆರೋಗ್ಯ ಕೇಂದ್ರದ ಎಎನ್‌ಎಂ (ಸಹಾಯಕ ಶುಶ್ರೂಷಕಿ) ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕೋವಿಡ್ ಲಸಿಕೆ ತುಂಬಿದ 29 ಸಿರಿಂಜನ್ನು ಫಲಾನುಭವಿಗಳಿಗೆ ನೀಡದೆ ವಿಲೇವಾರಿ ಮಾಡಿದ ಆರೋಪದ ಮೇಲೆ ಭಾನುವಾರ ಪ್ರಕರಣ ದಾಖಲಾಗಿದೆ.

ಜಮಾಲ್‌ಪುರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಈ ಘಟನೆ ವರದಿಯಾಗಿದೆ.

ADVERTISEMENT

ಲಸಿಕೆ ಸ್ವೀಕರಿಸಲು ಬರುತ್ತಿದ್ದ ಫಲಾನುಭವಿಗಳಿಗೆ ಎಎನ್‌ಎಂ ನೇಹಾ ಖಾನ್ ಸೂಜಿ ಚುಚ್ಚುತ್ತಿದ್ದರು. ಆದರೆ, ಲಸಿಕೆ ಬಿಡುಗಡೆ ಮಾಡದೆ ಹೊರಗೆ ತೆಗೆದುಕೊಂಡು ಹೋಗಿ ಲಸಿಕೆ ತುಂಬಿದ ಸಿರಿಂಜನ್ನು ಡಸ್ಟ್‌ಬಿನ್‌ಗೆ ಹಾಕುತ್ತಿದ್ದರು. ತನಿಖೆ ವೇಳೆ ಕಸದ ಬುಟ್ಟಿ 29 ಲಸಿಕೆ ತುಂಬಿದ ಸಿರಂಜ್ ಪತ್ತೆಯಾಗಿದೆ.

ಸಿಎಮ್‌ಒ ಕಚೇರಿಯ ದೂರಿನ ಮೇರೆಗೆ ಪೊಲೀಸರು ಎಎನ್‌ಎಂ ನೇಹಾ ಖಾನ್ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಕೀಯ ಅಧಿಕಾರಿ ಅಫ್ರೀನ್ ಜೆಹ್ರಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

‘ಸಿಎಂಒ ಕಚೇರಿಯಿಂದ 29 ಡೋಸ್ ಕೋವಿಡ್ -19 ಲಸಿಕೆಗಳು ಬಳಕೆಯಾಗದೆ ಉಳಿದಿವೆ ಎಂದು ದೂರು ಬಂದಿದೆ. ಆದರೆ, ಫಲಾನುಭವಿಗಳಿಗೆ ಲಸಿಕೆ ನೀಡದೆ ಪೋರ್ಟಲ್‌ನಲ್ಲಿ ಮಾಹಿತಿ ಅಪ್‌ಲೋಡ್ ಮಾಡಲಾಗಿದೆ. ಪ್ರಕರಣ ಸಂಬಂಧ, ಎಎನ್‌ಎಂ ನೇಹಾ ಖಾನ್ ಮತ್ತು ಅಫ್ರೀನ್ ಜೆಹ್ರಾ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ’ಎಂದು ಸಿವಿಲ್ ಲೈನ್ಸ್‌ನ ಸಿಒ ವಿಶಾಲ್ ಚೌಧರಿ ತಿಳಿಸಿದ್ದಾರೆ.

ಅಲಿಗಢದ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಐಪಿಸಿಯ ಸೆಕ್ಷನ್ 203/176/465/427/120 ಬಿ 3/4 ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.