ಭೋಪಾಲ್: ಮಧ್ಯಪ್ರದೇಶದ ಚಿಂದ್‌ವಾರ ಜಿಲ್ಲೆಯಲ್ಲಿ ಪ್ರತಿ ವರ್ಷನಡೆಯುವ ಗೋಟ್ ಮಾರ್ ಉತ್ಸವ(ಕಲ್ಲು ಹೊಡೆಯುವ ಹಬ್ಬ)ದಲ್ಲಿ 400 ಮಂದಿಗೆ ಗಾಯಗಳಾಗಿವೆ.
ಶನಿವರ ನಡೆದ ಈ ಹಬ್ಬದಲ್ಲಿ 12 ಮಂದಿಗೆ ಗಂಭೀರ ಗಾಯಗಳಾಗಿದ್ದು, ಇವರನ್ನು ಪಂಧುರ್ನಾದಲ್ಲಿರುವ ಸರ್ಕಾರಿ ಆಸ್ಪತ್ರಗೆ ದಾಖಲಿಸಲಾಗಿದೆ. ಇಬ್ಬರು ವ್ಯಕ್ತಿಗಳ ಕಣ್ಣಿಗೆ ಗಾಯವಾಗಿದೆ ಎಂದು ಪೊಲೀಸರು ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಪ್ರತಿ ವರ್ಷವೂ ಇಲ್ಲಿ ಪಂಧುರ್ನಾ ಮತ್ತು ಸಾವರ್‌ಗಾಂವ್ ಗ್ರಾಮವನ್ನು ವಿಭಜಿಸುವ ಜಾಮ್ ನದಿ ತಟದಲ್ಲಿ ಸೇರುತ್ತಾರೆ. ನದಿ ಮಧ್ಯೆ ಸ್ಥಾಪಿಸಿರುವ ಬಾವುಟವನ್ನು ಪಡೆಯಲು ಎರಡೂ ಗ್ರಾಮದವರು ಮುನ್ನುಗ್ಗುತ್ತಿರುವ ಹೊತ್ತಲ್ಲಿ ಗ್ರಾಮದ ಇತರ ಜನರು ಇವರಿಗೆ ಕಲ್ಲು ಹೊಡೆಯುತ್ತಾರೆ. ಇದು 400 ವರ್ಷಗಳಿಂದನಡೆದು ಬರುತ್ತಿರುವ ಪಾರಂಪರಿಕ ಹಬ್ಬವಾಗಿದೆ.
ಈ ಬಾರಿಪಂಧುರ್ನಾ ಗ್ರಾಮದ ಜನರು ಬಾವುಟ ಕಿತ್ತು ಗೆಲುವು ಸಾಧಿಸಿದ್ದರು. ಗೋಟ್‌ಮಾರ್ ಎಂದರೆ ಕಲ್ಲು ಹೊಡೆಯುವುದು ಎಂದರ್ಥ. ಇಲ್ಲಿನ ಸ್ಥಳೀಯ ಭಾಷೆಯಲ್ಲಿ ಗೋಟ್ ಅಂದರೆ ಕಲ್ಲು ಎಂಬರ್ಥವಿದೆ.
ಇಲ್ಲಿನ ಗ್ರಾಮದವರ ಪ್ರಕಾರ, ನೂರಾರು ವರ್ಷಗಳ ಹಿಂದೆ ಪಂಧುರ್ನಾ ಗ್ರಾಮದ ಯುವಕನೊಬ್ಬ ಸಾವರ್‌ಗಾಂವ್‌ನ ಯುವತಿಯನ್ನುಪ್ರೀತಿಸಿ ಈ ಜೋಡಿ ಊರಿನಿಂದ ಓಡಿ ಹೋಗಿದ್ದರು. ಇವರು ನದಿದಾಟುತ್ತಿದ್ದ ಹೊತ್ತಲ್ಲಿ ಸಾವರ್‌ಗಾಂವ್‌ನ ಜನರು ಕಲ್ಲು ಹೊಡೆದಿದ್ದರು. ಆಗ ಪಂಧುರ್ನಾ ಗ್ರಾಮದ ಜನರುನದಿ ದಾಟುವುದಕ್ಕೆ ಸಹಾಯ ಮಾಡಿದ್ದರು.
ಗೋಟ್ ಮಾರ್ ತುಂಬಾ ಹಳೆಯ ಸಂಪ್ರದಾಯ. ಹಬ್ಬವನ್ನು ಡ್ರೋನ್ಮತ್ತು ಸಿಸಿಟಿವಿ ಕ್ಯಾಮೆರಾಗಳಿಂದ ನಿಯಂತ್ರಿಸಲಾಗುತ್ತಿದೆ ಎಂದು ಚಿಂದ್ವಾರಾ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.