ಜಮ್ಮು: ಪವಿತ್ರ ಹಿಮಲಿಂಗ ಅಮರನಾಥ ಮಂದಿರಕ್ಕೆ 3,471 ಯಾತ್ರಿಗಳನ್ನು ಒಳಗೊಂಡ 23ನೇ ತಂಡವು ಇಂದು ಮುಂಜಾನೆ ಪ್ರಯಾಣ ಬೆಳೆಸಿತು.
654 ಮಹಿಳೆಯರು, 93 ಸಾಧುಗಳನ್ನು ಒಳಗೊಂಡ ಈ ತಂಡವು, ಮೂಲಶಿಬಿರದಿಂದ 114 ವಾಹನಗಳ ಸಿಆರ್‌ಪಿಎಫ್ ಬೆಂಗಾವಲು ಪಡೆಯ ಭದ್ರತೆಯೊಂದಿಗೆ ನಸುಕಿನ ವೇಳೆ 3.30ಕ್ಕೆ ಮೂಲ ಶಿಬಿರ ಭಗವತಿ ನಗರದಿಂದ ಹೊರಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2,398 ಯಾತ್ರಿಕರು ಸಾಂಪ್ರದಾಯಿಕ 48 ಕಿ.ಮೀ. ಉದ್ದದ ಪಹಲ್ಗಾಮ್ ಮಾರ್ಗದಲ್ಲಿ ತೆರಳಿದರೆ, 1,073 ಯಾತ್ರಿಕರು 14 ಕಿ.ಮೀ. ಕಡಿದಾದ ಬಾಲ್ಟಾಲ್ ಮಾರ್ಗವನ್ನು ಆಯ್ದುಕೊಂಡಿದ್ದಾರೆ.
ಜೂನ್ 29ರಂದು ಅಮರನಾಥ ಯಾತ್ರೆ ಆರಂಭಗೊಂಡಿದ್ದು, ಇಲ್ಲಿಯವರೆಗೆ 3.75 ಲಕ್ಷ ಮಂದಿ ಯಾತ್ರೆ ಬೆಳೆಸಿದ್ದಾರೆ. ಆಗಸ್ಟ್ 19ರಂದು ಯಾತ್ರೆ ಮುಕ್ತಾಯಗೊಳ್ಳಲಿದೆ.
3,880 ಮೀಟರ್ ಎತ್ತರದ ಪವಿತ್ರ ಗುಹೆ ದೇಗುಲಕ್ಕೆ ಕಳೆದ ವರ್ಷ 4.5 ಲಕ್ಷ ಭಕ್ತರು ಭೇಟಿ ನೀಡಿ ಶಿವನ ದರ್ಶನ ಪಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.