ಬರಾಸತ್ (ಪಶ್ಚಿಮ ಬಂಗಾಳ): ಕೋಲ್ಕತ್ತ ಸಮೀಪದ ಬರಾಸತ್‌ನಲ್ಲಿ ಗುರುವಾರ ಜಮಾತ್–ಉಲ್–ಮುಜಾಹಿದೀನ್ ಬಾಂಗ್ಲಾದೇಶ್ (ಜೆಎಂಬಿ) ಸಂಘಟನೆಗೆ ಸೇರಿದ ಇನ್ನೊಬ್ಬ ಭಯೋತ್ಪಾದಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲುಲು ಸೇನ್ ಅಲಿಯಾಸ್ ರಾಹುಲ್ ಸೇನ್ ಅಲಿಯಾಸ್ ರಾಹುಲ್ ಕುಮಾರ್ ಎಂಬಾತನನ್ನು ಪಶ್ಚಿಮ ಬಂಗಾಳ ಪೊಲೀಸ್‌ನ ವಿಶೇಷ ಕಾರ್ಯಪಡೆಯ ಸಿಬ್ಬಂದಿ ಉತ್ತರ 24 ಪರಗಣಾಸ್ ಜಿಲ್ಲೆಯ ಬರಾಸತ್ ಪಟ್ಟಣ ಪ್ರದೇಶದ ಆತನ ಮನೆಯಿಂದ ಬಂಧಿಸಿದರು. ಕೋಲ್ಕತ್ತದಲ್ಲಿ ಭಾನುವಾರ ಬಂಧಿತರಾದ ಮೂವರು ಜೆಎಂಬಿ ಉಗ್ರರೊಂದಿಗೆ ಈತ ನಿಕಟ ಸಂಪರ್ಕದಲ್ಲಿದ್ದ ಎಂದು ಅವರು ಹೇಳಿದ್ದಾರೆ.
‘ಎರಡು ಲ್ಯಾಪ್‌ಟಾಪ್‌ಗಳು, ಒಂದು ಐಪಾಡ್, ಎರಡು ಮೊಬೈಲ್ ಫೋನ್‌ಗಳು ಮತ್ತು ಕೆಲವು ಮಹತ್ವದ ದಾಖಲೆಗಳನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ. ಬಂಧಿತ ರಾಹುಲ್ ಸೇನ್ ಜೆಎಂಬಿ ಉಗ್ರರಿಗೆ ಹಣಕಾಸು ಮತ್ತು ಸರಕು ಸಾಗಣೆಯ ಬೆಂಬಲ ನೀಡುತ್ತಿದ್ದ. ಉಗ್ರರಿಗೆ ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್‌ಗಳನ್ನು ಈಗ ಮಾಡಿಸಿಕೊಟ್ಟಿದ್ದ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.