ಚೆನ್ನೈ: ತಮಿಳುನಾಡಿನ ಹಾಸ್ಟೆಲ್‌ವೊಂದರಲ್ಲಿ 12ನೇ ತರಗತಿ ವಿದ್ಯಾರ್ಥಿನಿ ಮೃತಪಟ್ಟಿರುವ ಮತ್ತೊಂದು ಘಟನೆ ವರದಿಯಾಗಿದೆ. ಕಳೆದ 15 ದಿನಗಳಲ್ಲಿ ಇದು 2ನೇ ಪ್ರಕರಣವಾಗಿದೆ.
ಸೋಮವಾರ ಬೆಳಗ್ಗೆ ತಿರುವಳ್ಳೂರು ಜಿಲ್ಲೆಯ ಕಿಲಾಚೇರಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ತನ್ನ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಗ್ಗೆ ಶಾಲೆಗೆ ತೆರಳಿದ್ದ ವಿದ್ಯಾರ್ಥಿನಿ ನಂತರ ಹಾಸ್ಟೆಲ್‌ಗೆ ಮರಳಿದ್ದರು. ವಿದ್ಯಾರ್ಥಿನಿ ಮತ್ತೆ ಶಾಲೆಗೆ ಹಿಂತಿರುಗದಿರುವುದನ್ನುಗಮನಿಸಿದ ಶಿಕ್ಷಕರು ಹಾಸ್ಟೆಲ್ ವಾರ್ಡನ್‌ಗೆ ಮಾಹಿತಿ ನೀಡಿದ್ದರು. ಹಾಸ್ಟೆಲ್ ಸಿಬ್ಬಂದಿ ವಿದ್ಯಾರ್ಥಿನಿ ಇದ್ದ ಕೋಣೆಯನ್ನು ತೆರೆದು ನೋಡಿದಾಗ ವಿದ್ಯಾರ್ಥಿನಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದಳು ಎಂದು ಹಾಸ್ಟೆಲ್ ವಾರ್ಡನ್ ಹೇಳಿದ್ದಾರೆ.
ಈ ಘಟನೆ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಹಾಸ್ಟೆಲ್ ಸುತ್ತ ಮುತ್ತ ಹಾಗೂ ಕಿಲಾಚೇರಿ, ತಿರುವಳ್ಳೂರುನಗರದಲ್ಲಿಪೊಲೀಸರು ವ್ಯಾಪಕ ಬಂದೋಬಸ್ತ್ ಮಾಡಿದ್ದಾರೆ
ವಿದ್ಯಾರ್ಥಿನಿ ಪೋಷಕರು, ಸಂಬಂಧಿಕರು ಈ ಘಟನೆ ಖಂಡಿಸಿ ಕಿಲಾಚೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕಳ್ಳಕುರುಚಿಯಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಚಿನ್ನಸೇಲಂನ ಕಣಿಯಮೂರ್ ಪ್ರದೇಶದ ಖಾಸಗಿ ವಸತಿ ಶಾಲೆಯಲ್ಲಿ 12 ನೇ ತರಗತಿ ಓದುತ್ತಿದ್ದ 17 ವರ್ಷದ ವಿದ್ಯಾರ್ಥಿನಿ ಜುಲೈ 13 ರಂದು ಹಾಸ್ಟೆಲ್ ಆವರಣದಲ್ಲಿ ಶವವಾಗಿ ಪತ್ತೆಯಾಗಿದ್ದಳು. ಸಾವಿಗೂ ಮೊದಲೇ ಆಕೆಗೆ ಗಾಯಗಳಾಗಿವೆ ಎಂದು ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿತ್ತು. ಈ ಘಟನೆ ಖಂಡಿಸಿ ತಮಿಳುನಾಡಿನಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.