ನ್ಯೂಯಾರ್ಕ್: ವಜ್ರಾಭರಣ ಉದ್ಯಮಿ ಮೆಹುಲ್ ಚೋಕ್ಸಿ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಎಲ್ಲ ರೀತಿ ಸಹಕರಿಸುವುದಾಗಿ ಆ್ಯಂಟಿಗುವಾ ಭರವಸೆ ನೀಡಿದೆ.
ವಿಶ್ವಸಂಸ್ಥೆಯ 73ನೇ ಸಾಮಾನ್ಯ ಅಧಿವೇಶನದ ಸಂದರ್ಭದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಆ್ಯಂಟಿಗುವಾ ಮತ್ತು ಬರ್ಬುಡಾದ ವಿದೇಶಾಂಗ ಸಚಿವ ಇ.ಪಿ. ಚೆಟ್ ಗ್ರೀನ್ ಅವರನ್ನು ಭೇಟಿಯಾಗಿ ಚೋಕ್ಸಿ ಹಸ್ತಾಂತರ ಕುರಿತು ಸಮಾಲೋಚಿಸಿಸಿದರು.
ಶೀಘ್ರದಲ್ಲಿ ಈ ವಿಷಯ ಇತ್ಯರ್ಥಗೊಳಿಸಲು ಪ್ರಧಾನಿ ಸಮ್ಮತಿಸಿದ್ದಾರೆ ಎಂದು ಗ್ರೀನ್ ಅವರು ಸುಷ್ಮಾ ಸ್ವರಾಜ್ ಅವರಿಗೆ ತಿಳಿಸಿದರು.
‘ಕಾನೂನಿನ ಚೌಕಟ್ಟಿನೊಳಗೆ ವಿಷಯ ಇತ್ಯರ್ಥವಾಗಬೇಕಾಗಿದೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.