ADVERTISEMENT

ಚೋಕ್ಸಿ ಅಪಹರಣ ಆರೋಪದ ತನಿಖೆ: ಪ್ರಧಾನಿ ಗ್ಯಾಸ್ಟನ್ ಬ್ರೌನ್

ಆಂಟಿಗುವಾ ಮತ್ತು ಬಾರ್ಬುಡಾ ರಾಯಲ್ ಪೊಲೀಸರಿಂದ ತನಿಖೆ

ಪಿಟಿಐ
Published 7 ಜೂನ್ 2021, 6:12 IST
Last Updated 7 ಜೂನ್ 2021, 6:12 IST
ಮೆಹುಲ್ ಚೋಕ್ಸಿ
ಮೆಹುಲ್ ಚೋಕ್ಸಿ   

ನವದೆಹಲಿ: ಬಹುಕೋಟಿ ಹಗರಣದ ಆರೋಪಿ, ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಅಪಹರಿಸಿ ಡೊಮಿನಿಕಾಗೆ ಕರೆದೊಯ್ಯಲಾಗಿದೆ ಎಂದು ಚೋಕ್ಸಿ ಅವರ ವಕೀಲರು ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಆಂಟಿಗುವಾ ಮತ್ತು ಬಾರ್ಬುಡಾದ ರಾಯಲ್ ಪೋಲಿಸ್ ಪಡೆ ತನಿಖೆ ಆರಂಭಿಸಿದೆ ಎಂದು ಪ್ರಧಾನಿ ಗ್ಯಾಸ್ಟನ್ ಬ್ರೌನ್ ಸ್ಥಳೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಅಪಹರಣದಲ್ಲಿ ಭಾಗಿಯಾಗಿರುವ ಜನರ ಹೆಸರನ್ನು ಚೋಕ್ಸಿಯ ವಕೀಲರು ಪೊಲೀಸ್ ಆಯುಕ್ತರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಬ್ರೌನ್ ಹೇಳಿರುವುದಾಗಿ ಆಂಟಿಗುವಾ ನ್ಯೂಸ್ ರೂಮ್ ವರದಿ ಮಾಡಿದೆ.

ಆಂಟಿಗುವಾ ಮತ್ತು ಬಾರ್ಬುಡಾ ಪ್ರಧಾನ ಮಂತ್ರಿ, ‘ಈ ಹೇಳಿಕೆಗಳು ನಿಜವಾಗಿದ್ದರೆ ಅದು ಗಂಭೀರ ವಿಷಯವಾಗಿದೆ‘ ಎಂದು ಹೇಳಿದ್ದಾರೆ. ಪೊಲೀಸರು ದೂರನ್ನು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ ಎಂದು ಬ್ರೌನ್ ತಿಳಿಸಿದ್ದಾರೆ.

ADVERTISEMENT

‘ತನ್ನನ್ನು ಅಪಹರಿಸಿ ಡೊಮಿನಿಕಾಗೆ ಕರೆದೊಯ್ಯಲಾಗಿದೆ‘ ಎಂದು ಚೋಕ್ಸಿ ತನ್ನ ವಕೀಲರ ಮೂಲಕ ಆಂಟಿಗುವಾ ಮತ್ತು ಬಾರ್ಬುಡಾದ ರಾಯಲ್ ಪೋಲಿಸರಿಗೆ ದೂರು ನೀಡಿದ್ದಾರೆ. ಇದೊಂದು ಗಂಭೀರ ಪ್ರಕರಣವಾಗಿದ್ದು, ಪೊಲೀಸರು ಅಪಹರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ‘ ಎಂದು ಬ್ರೌನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.