ಜೈಪುರ: ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲೂಟಿ ಸರ್ಕಾರದಿಂದ ಯಾವಾಗ ಮುಕ್ತಿ ಸಿಗುತ್ತದೋ ಎಂಬ ಜನರ ಕಾಯುವಿಕೆ ನಾಳೆ ಅಂತ್ಯವಾಗಲಿದೆ. ಸುಳ್ಳು ಹೇಳಿಕೆಗಳನ್ನು ಮತ್ತು ಭರವಸೆಗಳನ್ನು ನೀಡುವುದು ಕಾಂಗ್ರೆಸ್‌ನ ಹಳೆಯ ಅಭ್ಯಾಸವಾಗಿದೆ’ ಎಂದು ಟೀಕಿಸಿದರು.
‘ಕಾಂಗ್ರೆಸ್ ಮುಖವಾಡ ಬಯಲಾಗಿದೆ. ನಾಳೆ (ಭಾನುವಾರ) ಫಲಿತಾಂಶ ಮಾತ್ರ ಹೊರಬೀಳಲಿದೆ. ಸಾರ್ವಜನಿಕರು ಬಯಸಿದ ಉತ್ತಮ ಆಡಳಿತ ಬಿಜೆಪಿ ಸರ್ಕಾರದ ರೂಪದಲ್ಲಿ ರಾಜ್ಯದ ಜನರಿಗೆ ದೊರೆಯಲಿದೆ. ಜನರು ರಾಜ್ಯದಲ್ಲಿ ಅಭಿವೃದ್ಧಿ ಮತ್ತು ಡಬಲ್ ಎಂಜಿನ್ ಸರ್ಕಾರವನ್ನು (ಬಿಜೆಪಿ) ಬಯಸುತ್ತಾರೆ’ ಎಂದು ಠಾಕೂರ್ ಹೇಳಿದರು.
ರಾಜಸ್ಥಾನವು ಒಟ್ಟು 200 ವಿಧಾನಸಭಾ ಸ್ಥಾನಗಳನ್ನು ಹೊಂದಿದೆ. ಶ್ರೀಗಂಗಾನಗರ ಜಿಲ್ಲೆಯ ಕರಣಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಗುರ್ಮೀತ್ ಸಿಂಗ್ ಅವರ ನಿಧನದ ಕಾರಣ ಕ್ಷೇತ್ರದ ಮತದಾನವನ್ನು ಮುಂದೂಡಲಾಗಿರುವುದರಿಂದ ನವೆಂಬರ್ 25 ರಂದು 199 ಸ್ಥಾನಗಳಿಗೆ ಮತದಾನ ನಡೆದಿತ್ತು. ನಾಳೆ ಮತ ಎಣಿಕೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.