ನವದೆಹಲಿ: ಆಧುನೀಕರಣಗೊಳ್ಳುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿರುವ ಭಾರತೀಯ ವಾಯುಪಡೆಗೆ ಇಂದು, ಅಮೆರಿಕನಿರ್ಮಿತ ಅಪಾಚೆ ಎಎಚ್64ಇ(ಐ) ಹೆಲಿಕಾಪ್ಟರ್‌ಸೇರ್ಪಡೆಯಾಯಿತು.
ಪಠಾಣ್‌ಕೋಟ್‌ನಲ್ಲಿರುವ ಸೇನಾನೆಲೆಯಲ್ಲಿ ಬೋಯಿಂಗ್ ಇಂಡಿಯಾ ಅಧ್ಯಕ್ಷ ಸಲೀಲ್ ಗುಪ್ತೆ ಅವರು ವಾಯುಪಡೆಯ ಮುಖ್ಯಸ್ಥ ಬಿ.ಎಸ್.ಧನೋವಾ ಅವರಿಗೆ ಯುದ್ಧ ಹೆಲಿಕಾಪ್ಟರ್‌ನ ಕೀ ನೀಡಿದರು.
ವಾಯುಪಡೆಯುತನ್ನಅಧಿಕೃತ ಟ್ವಿಟರ್ ಖಾತೆಯಲ್ಲಿ ಸೋಮವಾರವೇಮಾಹಿತಿ ನೀಡಿತ್ತು.
22 ಅಪಾಚೆ ಯುದ್ಧ ಹೆಲಿಕಾಪ್ಟರ್‌ಗಳನ್ನು ಖರೀದಿಸುವ ಸಂಬಂಧ 2015ರ ಸೆಪ್ಟೆಂಬರ್‌ನಲ್ಲಿ ಭಾರತ ಹಾಗೂ ಅಮೆರಿಕ ನಡುವಣ ಬಹುಕೋಟಿ ಮೊತ್ತದ ರಕ್ಷಣಾ ಒಪ್ಪಂದ ಏರ್ಪಟ್ಟಿತ್ತು.
ಇದನ್ನೂ ಓದಿ:22 ಅಪಾಚೆ, 15 ಚಿನೂಕ್ ಹೆಲಿಕಾಪ್ಟರ್ ಖರೀದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.