ADVERTISEMENT

ರಾಯಗಡದ ಮ್ಯಾಂಗ್ರೋವ್ ಕಾಡು ರಕ್ಷಣೆಗೆ ಕೈಜೋಡಿಸಿದ ಆ್ಯಪಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಏಪ್ರಿಲ್ 2022, 10:17 IST
Last Updated 22 ಏಪ್ರಿಲ್ 2022, 10:17 IST
   

ಬೆಂಗಳೂರು: ಮಹಾರಾಷ್ಟ್ರದ ರಾಯಗಡದ ಮ್ಯಾಂಗ್ರೋವ್ ಕಾಡು ರಕ್ಷಣೆಗೆ ಟೆಕ್ ದೈತ್ಯ ಸಂಸ್ಥೆ ಆ್ಯಪಲ್, ಎನ್‌ಜಿಒ ಒಂದರ ಜತೆ ಕೈಜೋಡಿಸಿದೆ.

ಪರಿಸರ ಸ್ನೇಹಿ ಕ್ರಮಗಳನ್ನು ಉತ್ಪಾದನಾ ಘಟಕ ಮತ್ತು ಆ್ಯಪಲ್ ಉತ್ಪನ್ನಗಳಲ್ಲಿ ಅಳವಡಿಸಿಕೊಳ್ಳುವ ಮೂಲಕ ಆ್ಯಪಲ್ ಕಂಪನಿ, ಹಸಿರು ರಕ್ಷಣೆಗೆ ಪಣ ತೊಟ್ಟಿದೆ.

ಜತೆಗೆ ವಿಶ್ವದಾದ್ಯಂತ ಇರುವ ಅ‍ಪರೂಪದ ಜೀವಸಂಕುಲದ ಉಳಿವಿಗೆ ಪರಿಸರ ಸಂಬಂಧಿ ಎನ್‌ಜಿಒ ಜತೆ ಕೈಜೋಡಿಸಿ, ವಿವಿಧ ಕ್ರಮಗಳನ್ನು ಆ್ಯಪಲ್ ಕೈಗೊಳ್ಳುತ್ತಿದೆ.

ADVERTISEMENT

ಈ ಬಾರಿ ಆ್ಯಪಲ್, ಮಹಾರಾಷ್ಟ್ರದ ರಾಯಗಡದಲ್ಲಿರುವ 2,500 ಎಕರೆಯಷ್ಟು ಮ್ಯಾಂಗ್ರೋವ್ ಕಾಡನ್ನು ರಕ್ಷಿಸಲು ಅಪ್ಲೈಡ್ ಎನ್ವಿರಾನ್‌ಮೆಂಟ್ ರಿಸರ್ಚ್ ಫೌಂಡೇಶನ್ ಜತೆ ಸಹಯೋಗ ಹೊಂದಿದೆ.

ವಿಶ್ವ ಭೂಮಿ ದಿನದಂದು ಈ ಬಗ್ಗೆ ಆ್ಯಪಲ್ ಪ್ರಕಟಿಸಿದ್ದು, ಮ್ಯಾಂಗ್ರೋವ್ ಕಾಡಿನಲ್ಲಿ ಆಶ್ರಯ ಪಡೆದಿರುವ ವಿಶಿಷ್ಟ ಜೀವಸಂಕುಲಕ್ಕೆ ನೆರವಾಗುವ ಜತೆಗೆ, ಕಾಡಿನ ರಕ್ಷಣೆಗೆ ಪರಿಸರಸ್ನೇಹಿ ಕ್ರಮಗಳನ್ನು ಕೈಗೊಳ್ಳುವುದಾಗಿ ಘೋಷಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.