ADVERTISEMENT

ಕೇರಳ ಸರ್ಕಾರದ ವಿದೇಶಾಂಗ ಕಾರ್ಯದರ್ಶಿ ಹುದ್ದೆ ವಿವಾದ: ಲೋಕಸಭೆಯಲ್ಲಿ ‍‍ಪ್ರಸ್ತಾಪ

ಪಿಟಿಐ
Published 22 ಜುಲೈ 2024, 11:14 IST
Last Updated 22 ಜುಲೈ 2024, 11:14 IST
<div class="paragraphs"><p>ಪಿಣರಾಯಿ ವಿಜಯನ್‌&nbsp;&nbsp;ಕೇರಳಸಿಎಂ</p></div>

ಪಿಣರಾಯಿ ವಿಜಯನ್‌  ಕೇರಳಸಿಎಂ

   

ನವದೆಹಲಿ: ಕೇರಳ ಸರ್ಕಾರ ಪ್ರತ್ಯೇಕವಾಗಿ ವಿದೇಶಾಂಗ ಕಾರ್ಯದರ್ಶಿ ಎಂಬ ಹುದ್ದೆಯನ್ನು ಸೃಷ್ಟಿಸಿದ್ದು ಸಂಪೂರ್ಣವಾಗಿ ಅಸಂವಿಧಾನಿಕ ಮತ್ತು ಆಕ್ರಮಣಕಾರಿ ಎಂದು ಬಿಜೆಪಿ ಸಂಸದ ಪಿ.ಪಿ ಚೌಧರಿ ಅವರು ಲೋಕಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇರಳ ಸರ್ಕಾರ ಕೆ ವಾಸುಕಿ ಎನ್ನುವರನ್ನು ಜುಲೈ 15ರಂದು ತನ್ನ ವಿದೇಶಾಂಗ ಕಾರ್ಯದರ್ಶಿ ಎಂದು ನೇಮಿಸಿರುವುದು ಕೇಂದ್ರದ ವಿರುದ್ಧ ತೊಡೆ ತಟ್ಟುವ ನಡೆ ಎಂದು ಹೇಳಿದ್ದಾರೆ.

ADVERTISEMENT

ಈ ಮೂಲಕ ಕೇರಳ ತಾನೊಂದು ಪ್ರತ್ಯೇಕ ದೇಶ ಎಂದು ಹೇಳಲು ಹೊರಟಿದೆ ಎಂದು ಅವರು ಆರೋಪಿಸಿದ್ದಾರೆ.

ಈಗಾಗಲೇ ಭಾರತದ ವಿದೇಶಾಂಗ ಇಲಾಖೆ ಒಕ್ಕೂಟ ವ್ಯವಸ್ಥೆಯ ಹಿತವನ್ನು ಗಮನದಲ್ಲಿಟ್ಟುಕೊಂಡು ಸಶಕ್ತವಾಗಿ ಕಾರ್ಯನಿರ್ವಹಿಸುತ್ತಿದೆ. ಹೀಗಿದ್ದೂ ಕೇರಳ ಸರ್ಕಾರದ ಈ ನಡೆ ತೀವ್ರ ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇರಳ ಸರ್ಕಾರ ಪತ್ಯೇಕ ವಿದೇಶಾಂಗ ಕಾರ್ಯದರ್ಶಿ ಹುದ್ದೆ ಸೃಜಿಸಿರುವುದು ಕೇಂದ್ರ ಪಟ್ಟಿಯಲ್ಲಿರುವ ಕೆಲಸಗಳಲ್ಲಿ ವಿನಾಕಾರಣ ಮೂಗುತೂರಿಸುವುದೇ ಆಗಿದೆ ಎಂದು ಅವರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.