ADVERTISEMENT

ಮೂರ್ಖರ ದಿನವೇ, ಪಪ್ಪು ದಿವಸ!

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 9:27 IST
Last Updated 1 ಏಪ್ರಿಲ್ 2019, 9:27 IST
   

ಬೆಂಗಳೂರು: ಎಲ್ಲರಿಗೂ ಪಪ್ಪು ದಿನದ ಶುಭಾಶಯಗಳು!

ಹೀಗೆಂದು ನಾವು ಹೇಳುತ್ತಿಲ್ಲ. ಏಪ್ರಿಲ್‌ 1 ಎಲ್ಲರಿಗೂ ಗೊತ್ತಿರುವ ಹಾಗೆಯೇ ಮೂರ್ಖರ ದಿನ. ಆದರೆ, ಇದು ಪಪ್ಪು (ರಾಹುಲ್‌ ಗಾಂಧಿ) ದಿನ ಎಂದು ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿದೆ.

ರಾಹುಲ್‌ ಗಾಂಧಿ ಅವರು ಮಾತುಗಳನ್ನು ವ್ಯಂಗ್ಯ ಮಾಡಿ ಸಾಕಷ್ಟು ಮಂದಿ ಪಪ್ಪುದಿನಕ್ಕೆ ಶುಭಾಶಯ ಕೋರಿದ್ದಾರೆ. ಅವರ ವಿಚಿತ್ರ ಮುಖಭಾವಿರುವ ಚಿತ್ರಗಳನ್ನು ಹಾಕಿ ಮೂರ್ಖರ ದಿನಎಂದು ಟ್ವೀಟ್‌ಮಾಡಿದ್ದಾರೆ.

ADVERTISEMENT

ಹೀಗೆ ಮೂರ್ಖರ ದಿನವನ್ನು ಪಪ್ಪು ದಿನ ಎಂದು ಬದಲಿಸಿ ಶುಭ ಕೋರಿತ್ತಿರುವವರಲ್ಲಿ ಮೋದಿ ಬೆಂಬಲಿಗರೇ ಹೆಚ್ಚು. ಹೆಸರಿನ ಮುಂದೆ ಚೌಕಿದಾರ ಎಂದು ಬರೆದುಕೊಂಡಿರುವವರ ಟ್ವಿಟರ್‌ ಖಾತೆಗಳಲ್ಲಿಯೇ ಈ ಕುರಿತ ಪೋಸ್ಟ್‌ಗಳಿವೆ. ವಿವಿಧ ಕಾರ್ಯಕ್ರಮಗಳಲ್ಲಿ ರಾಹುಲ್‌ಗಾಂಧಿ ಮಾಡಿರುವ ಭಾಷಣಗಳ ತುಣುಕು, ಭಾವಚಿತ್ರಗಳನ್ನು ಪ್ರಕಟಿಸಿಕೊಂಡು, ಪಪ್ಪು ದಿನ ಎಂದು ಬರೆದುಕೊಂಡಿದ್ದಾರೆ.

ಮೂರ್ಖರ ದಿನದ ಕುರಿತು ಪೋಸ್ಟ್‌ ಮಾಡಿರುವವರಿಗಿಂತ, ಪಪ್ಪುದಿನ ಎಂದು ಹೇಳಿ ಟ್ವೀಟ್‌ ಮಾಡಿರುವವರ ಸಂಖ್ಯೆಯೇ ಹೆಚ್ಚಾಗಿದೆ. ಇಲ್ಲಿಯವರೆಗೆ 4,253 ಟ್ವೀಟ್‌ಗಳು ಈ ಬಗ್ಗೆ ಪ್ರಕಟವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.