ADVERTISEMENT

ಮುಂಬೈ | ‘ಆರಕ್ಷಣ ಬಚಾವೊ’ ಯಾತ್ರೆ ನಾಳೆಯಿಂದ

ಪಿಟಿಐ
Published 24 ಜುಲೈ 2024, 4:06 IST
Last Updated 24 ಜುಲೈ 2024, 4:06 IST
<div class="paragraphs"><p>ಪ್ರಕಾಶ್ ಅಂಬೇಡ್ಕರ್</p></div>

ಪ್ರಕಾಶ್ ಅಂಬೇಡ್ಕರ್

   

– ಪಿಟಿಐ ಚಿತ್ರ

ಮುಂಬೈ: ಮಹಾರಾಷ್ಟ್ರದಲ್ಲಿ ಮರಾಠ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿಗೆ ಒತ್ತಾಯಿಸಿ ಎರಡು ಪ್ರತ್ಯೇಕ ಆಂದೋಲನಗಳು ನಡೆಯುತ್ತಿರುವ ನಡುವೆಯೇ, ಇದೇ 25ರಿಂದ ಆಗಸ್ಟ್ 7ರವರೆಗೆ ರಾಜ್ಯದಾದ್ಯಂತ ‘ಆರಕ್ಷಣ ಬಚಾವೊ ಯಾತ್ರೆ’ ಕೈಗೊಳ್ಳಲು ವಂಚಿತ್ ಬಹುಜನ ಅಘಾಡಿ ಸಂಸ್ಥಾಪಕ ಪ್ರಕಾಶ್ ಅಂಬೇಡ್ಕರ್ ಮುಂದಾಗಿದ್ದಾರೆ. 

ADVERTISEMENT

ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭ ವಾಗಿರುವ ಬೆನ್ನಲ್ಲೇ, ಪ್ರಕಾಶ್ ಅಂಬೇಡ್ಕರ್ ಅವರು ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಮೀಸಲಾತಿಯ ರಕ್ಷಣೆಯ ಭಾಗವಾಗಿ ಈ ಯಾತ್ರೆಗೆ ನಿರ್ಧರಿಸಿದ್ದಾರೆ. ಮುಂಬೈ ನಲ್ಲಿರುವ ಚೈತ್ಯಭೂಮಿಯಲ್ಲಿ ಈ ಯಾತ್ರೆಗೆ ಚಾಲನೆ ಸಿಗಲಿದ್ದು, ಪುಣೆಯಲ್ಲಿರುವ ಜ್ಯೋತಿರಾವ್ ಫುಲೆ ಸ್ಮಾರಕ ಇರುವ ಫುಲೆ ವಾಡವರೆಗೆ ಯಾತ್ರೆ ಸಾಗಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.