ಪುಣೆ: ಪ್ರಸ್ತುತ ಯುದ್ದ ಎನ್ನುವುದು ಅನಿರೀಕ್ಷಿತ ಭದ್ರತಾ ಸನ್ನಿವೇಶಗಳ ಜತೆಗೆ ಅತ್ಯಂತ ಸಂಕೀರ್ಣ ಮತ್ತು ಬಹು ಆಯಾಮಗಳಿಂದ ಕೂಡಿದೆ ಎಂದು ವಾಯುಸೇನೆ ಮುಖ್ಯಸ್ಥ ಆರ್.ಕೆ.ಎಸ್ ಭದೌರಿಯಾ ಹೇಳಿದರು.
ಇಂಥ ಪರಿಸ್ಥಿತಿಯಲ್ಲಿ ಭಯೋತ್ಪಾದಕರು ನಡೆಸುವಂತಹ (ಹೈಬ್ರಿಡ್) ದಾಳಿಗಳನ್ನು ಎದುರಿಸಲು ರಕ್ಷಣಾ ಪಡೆಗಳು ಸನ್ನದ್ಧವಾಗಿರಬೇಕು ಎಂದು ಅವರು ತಿಳಿಸಿದರು.
ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ (ಎನ್‌ಡಿಎ) 139ನೇ ಕೋರ್ಸ್‌ನ ವಿದ್ಯಾರ್ಥಿಗಳ ನಿರ್ಗಮನದ ಸಮಾರಂಭದಲ್ಲಿ ಮಾತನಾಡಿದ ಅವರು, ‘ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ (ಸಿಡಿಎಸ್) ಹುದ್ದೆ ಮತ್ತು ಮಿಲಿಟರಿ ವ್ಯವಹಾರಗಳ ಇಲಾಖೆ (ಡಿಎಂಎ)ಯನ್ನು ಸೃಷ್ಟಿಸಿರುವುದು, ರಕ್ಷಣಾ ಕ್ಷೇತ್ರದ ಸುಧಾರಣೆಗೆ ಕಾರಣವಾಗುತ್ತದೆ ಎಂದು ಅವರು ಶ್ಲಾಘಿಸಿದರು.
‘ಎನ್‌ಡಿಎ ಕೇವಲ ನಾಯಕತ್ವ ಸೃಷ್ಟಿಸುವ ತಾಣವಷ್ಟೇ ಅಲ್ಲ, ಬದಲಿಗೆ ಜಂಟಿಯಾಗಿ ಕಾರ್ಯ ನಿರ್ವಹಣೆಯನ್ನು ಸೃಷ್ಟಿಸುವ ತಾಣವಾಗಿದೆ. ಈ ಜಂಟಿ ತರಬೇತಿಯ ಅಪಾರ ಅನುಭವವನ್ನು ಆಯಾ ಅಕಾಡೆಮಿಗಳಿಗೆ ಕೊಂಡೊಯ್ಯಬೇಕಿದೆ‘ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.