ADVERTISEMENT

ಜಮ್ಮುವಿನ ಗಡಿಯಲ್ಲಿ 9 ಗ್ರೆನೇಡ್, ಐಇಡಿ, ಮದ್ದುಗುಂಡುಗಳಿದ್ದ ಬಾಕ್ಸ್ ಪತ್ತೆ

ಪಿಟಿಐ
Published 24 ನವೆಂಬರ್ 2023, 2:36 IST
Last Updated 24 ನವೆಂಬರ್ 2023, 2:36 IST
   

ಜಮ್ಮು: ಜಮ್ಮುವಿನ ಅಖ್ನೂರ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯಲ್ಲಿ ಕ್ವಾಡ್‌ಕಾಪ್ಟರ್‌ನಿಂದ ಬಿದ್ದ ಒಂಬತ್ತು ಗ್ರೆನೇಡ್‌ಗಳು ಮತ್ತು ಐಇಡಿ ಸೇರಿದಂತೆ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಹಾಗೂ ಸ್ಫೋಟಕಗಳನ್ನು ಭದ್ರತಾ ಪಡೆಯ ಸಿಬ್ಬಂದಿ ವಶಪಡಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಎಲ್ಲವುಗಳನ್ನು ಒಂದು ಬಾಕ್ಸ್‌ನಲ್ಲಿ ಇಡಲಾಗಿತ್ತು. ಮುಂಜಾನೆ ಎಲ್‌ಒಸಿ ಬಳಿಯ ಪಲನ್‌ವಾಲಾದಲ್ಲಿ ಪೊಲೀಸರು ಮತ್ತು ಸೇನೆಯ ಜಂಟಿ ಶೋಧ ಕಾರ್ಯಾಚರಣೆಯಲ್ಲಿ ಬಾಕ್ಸ್‌ ಪತ್ತೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಾಕ್ಸ್ ತೆರೆಯುವ ಮೊದಲು ಬಾಂಬ್ ನಿಷ್ಕ್ರಿಯ ದಳದಿಂದ ಸ್ಕ್ಯಾನ್ ಮಾಡಲಾಗಿತ್ತು.

ADVERTISEMENT

ಬಾಕ್ಸ್ ಅನ್ನು ತೆರೆದಾಗ ಅದರಲ್ಲಿ ಸುಧಾರಿತ ಸ್ಫೋಟಕ ಸಾಧನ ಅಥವಾ ಐಇಡಿ, ಟರ್ಕಿ ಪಿಸ್ತೂಲ್, ಎರಡು ಮ್ಯಾಗಜೀನ್‌ಗಳು, 38 ಸುತ್ತು ಮದ್ದುಗುಂಡುಗಳು ಮತ್ತು ಒಂಬತ್ತು ಗ್ರೆನೇಡ್‌ಗಳು ಇರುವುದು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ವಾಡ್‌ಕಾಪ್ಟರ್ ತರಹದ ಶಬ್ದದ ವರದಿಗಳ ಆಧಾರದ ಮೇಲೆ ಲೌಕಿಖಾಡ್ ಸೇತುವೆಯ ಸಮೀಪದಲ್ಲಿ ಪೊಲೀಸರು ಮತ್ತು ಸೇನೆಯ ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಈ ಬಾಕ್ಸ್ ಪತ್ತೆಯಾಗಿದೆ ಎಂದು ರಕ್ಷಣಾ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

‘ಇದು ಜಮ್ಮು ಮತ್ತು ಕಾಶ್ಮೀರದ ರಜೌರಿ ಮತ್ತು ಅಖ್ನೂರ್ ಸೆಕ್ಟರ್‌ಗಳಲ್ಲಿ ಭಯೋತ್ಪಾದನೆಯನ್ನು ಸಕ್ರಿಯಗೊಳಿಸುವ ಗುರಿಯನ್ನು ಹೊಂದಿರುವಂತೆ ತೋರುತ್ತಿದೆ. ಅಖ್ನೂರ್ ಸೆಕ್ಟರ್‌ನಲ್ಲಿ ಕ್ವಾಡ್‌ಕಾಪ್ಟರ್‌ನಿಂದ ಹಾಕಲಾದ ಶಸ್ತ್ರಾಸ್ತ್ರಗಳು ಯುದ್ಧದಂತಹ ಪರಿಸ್ಥಿತಿಯಲ್ಲಿ ಶಸ್ತ್ರಾಸ್ತ್ರ ಸಾಗಣೆ ರೀತಿ ಕಂಡುಬಂದಿದೆ’ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.