ನವದೆಹಲಿ: ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಶುಕ್ರವಾರ ಮಧ್ಯಾಹ್ನ ಭೂತಾನ್‌ನ ಪೂರ್ವಭಾಗದಲ್ಲಿ ನೆಲಕ್ಕುರುಳಿದ್ದು, ಇಬ್ಬರೂ ಪೈಲಟ್‌ಗಳು ಮೃತಪಟ್ಟಿದ್ದಾರೆ.
ಒಂದೇ ಎಂಜಿನ್‌ನ ಈ ಹೆಲಿಕಾಪ್ಟರ್ ಅರುಣಾಚಲ ಪ್ರದೇಶದ ಕಿರ್ಮುವಿನಿಂದ ಭೂತಾನ್‌ನ ಯೊನ್‌ಫುಲಕ್ಕೆ ತೆರಳುತ್ತಿದ್ದು, ಮಧ್ಯಾಹ್ನ 1 ಗಂಟೆ ವೇಳೆಗೆ ಸಂಪರ್ಕವನ್ನು ಕಡಿದುಕೊಂಡಿತು.
ಭಾರತೀಯ ಸೇನೆಯ ಒಬ್ಬರು, ರಾಯಲ್ ಭೂತಾನ್ ಸೇನೆಯ ಇನ್ನೊಬ್ಬ ಪೈಲಟ್ ಮೃತಪಟ್ಟಿದ್ದಾರೆ. ಸಂಪರ್ಕ ಕಡಿತವಾದ ಹಿಂದೆಯೇ ಹುಡುಕಾಟ ಆರಂಭವಾಗಿದ್ದು, ಅವಶೇಷಗಳು ಯೊನ್‌ಫುಲದಲ್ಲಿ ಪತ್ತೆಯಾಯಿತು ಎಂದು ಅಧಿಕಾರಿ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.