ADVERTISEMENT

ವಿಮಾನದಲ್ಲಿ ಉಸಿರಾಟ ಸಮಸ್ಯೆಗೆ ಒಳಗಾಗಿದ್ದ ಪ್ರಯಾಣಿಕನ ಜೀವ ಉಳಿಸಿದ ಸೇನಾ ವೈದ್ಯ

ಪಿಟಿಐ
Published 18 ಜೂನ್ 2024, 12:36 IST
Last Updated 18 ಜೂನ್ 2024, 12:36 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಮುಂಬೈ: ಪುಣೆ– ಚಂಡೀಗಢ ವಿಮಾನದಲ್ಲಿ ಅಸ್ವಸ್ಥರಾಗಿದ್ದ 27 ವರ್ಷದ ಪ್ರಯಾಣಿಕರೊಬ್ಬರ ಪ್ರಾಣವನ್ನು ಅದೇ ವಿಮಾನದಲ್ಲಿದ್ದ ಸೇನಾ ವೈದ್ಯರೊಬ್ಬರು ತುರ್ತು ಚಿಕಿತ್ಸೆ ನೀಡಿ ಪ್ರಾಣ ಉಳಿಸಿದ್ದಾರೆ. ಬಳಿಕ ವಿಮಾನ ಮುಂಬೈನಲ್ಲಿ ತುರ್ತು ಲ್ಯಾಂಡಿಂಗ್‌ ಮಾಡಲಾಗಿದೆ.

‘ಇಂಡಿಗೋ ವಿಮಾನದಲ್ಲಿ ನಾನು ಪುಣೆಯಿಂದ ಚಂಡೀಗಢಕ್ಕೆ ಪ್ರಯಾಣಿಸುತ್ತಿದ್ದೆ. ಗೋವಾದಲ್ಲಿ ಹತ್ತಿದ್ದ ಪ್ರಯಾಣಿಕರೊಬ್ಬರಿಗೆ ವಿಮಾನ 39 ಸಾವಿರ ಅಡಿ ಎತ್ತರಕ್ಕೆ ಹೋಗುತ್ತಿದ್ದಂತೆ ಉಸಿರಾಟದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಅವರ ಆರೋಗ್ಯ ಇತಿಹಾಸದ ಬಗ್ಗೆ ವಿಚಾರಿಸಿದಾಗ ಮೂತ್ರಪಿಂಡದ ಸಮಸ್ಯೆ ಇರುವುದು ತಿಳಿದುಬಂದಿತು ಎಂದು ಹರಿಯಾಣದ ಪಶ್ಚಿಮ ಕಮಾಂಡ್‌ ಆಸ್ಪತ್ರೆಯ ವೈದ್ಯ ಮೇಜರ್‌ ಸಿಮ್ರತ್‌ ರಜದೀಪ್‌ ತಿಳಿಸಿದ್ದಾರೆ.

ADVERTISEMENT

ರೋಗಿ ಅಧಿಕ ದ್ರವ ಪದಾರ್ಥ ಸೇವನೆ ಮತ್ತು ಅರೆ ನಿದ್ರಾವಸ್ಥೆಯಲ್ಲಿದ್ದರು. ಜತೆಗೆ ಅಧಿಕ ರಕ್ತದೊತ್ತಡ, ಹೃದಯಬಡಿತದಲ್ಲಿ ಹೆಚ್ಚಳ ಹಾಗೂ ಅಸಪರ್ಮಕ ಉಸಿರಾಟ ಸಮಸ್ಯೆಯನ್ನು ಸಹ ಹೊಂದಿದ್ದರು. ಪರಿಣಾಮ ಉಸಿರುಗಟ್ಟುವಿಕೆ ಉಂಟಾಗಿದೆ. ವಿಮಾನ ಸಿಬ್ಬಂದಿ ಬಳಿ ಇದ್ದ ವೈದ್ಯಕೀಯ ಕಿಟ್‌ನಲ್ಲಿ ಹಲವು ರೀತಿಯ ಔಷಧ ಮತ್ತು ಅಗತ್ಯ ಉಪಕರಣಗಳಿದ್ದವು. ಅವುಗಳ ಸಹಾಯದಿಂದ ಚಿಕಿತ್ಸೆ ನೀಡಲಾಯಿತು. ತಕ್ಷಣವೇ ಸಿಬ್ಬಂದಿ ಗಮನಕ್ಕೆ ತಂದು ವಿಮಾನವನ್ನು ಮುಂಬೈನಲ್ಲಿ ತುರ್ತು ಲ್ಯಾಂಡಿಂಗ್‌ ಮಾಡಿಸಲಾಯಿತು. ಬಳಿಕ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಸಿಮ್ರತ್‌ ಅವರು ಪಿಟಿಐಗೆ ಮಾಹಿತಿ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.