ADVERTISEMENT

ಸೇನೆಯ ಮೊದಲ ಮಹಿಳಾ ಸುಬೇದಾರ್ ಪ್ರೀತಿ ರಜಾಕ್‌

ಪಿಟಿಐ
Published 27 ಜನವರಿ 2024, 16:22 IST
Last Updated 27 ಜನವರಿ 2024, 16:22 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ನವದೆಹಲಿ: ಚಾಂಪಿಯನ್ ಶೂಟರ್‌ ಹವಿಲ್ದಾರ್‌ ಪ್ರೀತಿ ರಜಾಕ್‌ ಅವರು ಭಾರತೀಯ ಸೇನೆಯ ಮೊದಲ ಮಹಿಳಾ ಸುಬೇದಾರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಪ್ರೀತಿ 2022 ಡಿಸೆಂಬರ್‌ನಲ್ಲಿ ಸೇನೆಗೆ ಸೇರಿದ್ದರು. 

ADVERTISEMENT

‘ಪ್ರೀತಿ ರಜಾಕ್‌ ಅವರು ಪದೋನ್ನತಿ ಹೊಂದಿರುವುದು ಭಾರತೀಯ ಸೇನೆ ಮತ್ತು ಮಹಿಳೆಯರಿಗೆ ಹೆಮ್ಮೆಯ ವಿಷಯ.  ಅವರ ಸಾಧನೆಯು ನಾರಿಶಕ್ತಿಯ ಪ್ರತೀಕ’ ಎಂದು ಸೇನೆ ತಿಳಿಸಿದೆ.

ಪ್ರೀತಿ ಅವರು ಚೀನಾ ಹ್ಯಾಂಗ್‌ಝೌನಲ್ಲಿ ನಡೆದಿದ್ದ 19ನೇ ಏಷ್ಯನ್‌ ಗೇಮ್ಸ್‌ನಲ್ಲಿ ಮಹಿಳೆಯರ ಶೂಟಿಂಗ್‌ನ ಗುಂಪು ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದರು. ಆರನೇ ಶ್ರೇಯಾಂಕಿತ ಆಟಗಾರ್ತಿಯಾಗಿರುವ ಪ್ರೀತಿ 2024ರಲ್ಲಿ ನಡೆಯಲಿರುವ ಪ್ಯಾರಿಸ್‌ ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಲು ಸಿದ್ಧತೆ ನಡೆಸುತ್ತಿದ್ದಾರೆ.

ಸುಬೇದಾರ್‌ ಮೇಜರ್‌ ಮತ್ತು ಗೌರವ ಲೆಫ್ಟಿನೆಂಟ್ ಜೀತು ರೈ ಅವರು, ಸುಬೇದಾರ್‌ ಮೇಜರ್‌ ಮತ್ತು ಗೌರವ ಕ್ಯಾಪ್ಟನ್‌ ಆಗಿ ಪದೋನ್ನತಿಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.