ಸಿಯಾಚಿನ್: ಸಿಯಾಚಿನ್ ನೀರ್ಗಲ್ಲಿನಲ್ಲಿ ಬುಧವಾರ ನಸುಕಿನ 3 ಗಂಟೆಯಲ್ಲಿ ನಡೆದಿರುವ ಬೆಂಕಿ ಆಕಸ್ಮಿಕದಲ್ಲಿ ಒಬ್ಬರು ಸೇನಾಧಿಕಾರಿ ಮೃತಪಟ್ಟಿದ್ದು, ಮೂವರು ಯೋಧರು ಗಂಭೀರ ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಸೇನೆಯ ರೆಜಿಮೆಂಟಲ್ ವೈದ್ಯಾಧಿಕಾರಿ, ಕ್ಯಾಪ್ಟನ್ ಅಂಶುಮನ್ ಸಿಂಗ್ ಅವರು ಗಂಭೀರ ಸುಟ್ಟ ಗಾಯಗಳಿಂದ ಮೃತರಾಗಿದ್ದಾರೆ. ಉಳಿದ ಮೂವರು ಯೋಧರಿಗೆ ಎರಡನೇ ಹಂತದ ಸುಟ್ಟಗಾಯಗಳಾಗಿದ್ದು, ಹೊಗೆ ಉಸಿರಾಡಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳನ್ನು ಸ್ಥಳಾಂತರಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.