ನವದೆಹಲಿ: ‘ಅಗ್ನಿಪಥ’ ಯೋಜನೆಯಡಿ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡುವ ಮೂಲಕ ಭಾರತೀಯ ವಾಯುಪಡೆಯು ಶುಕ್ರವಾರ ನೇಮಕಾತಿ ಪ್ರಕ್ರಿಯೆ ಆರಂಭಿಸಿತು. ಯೋಜನೆ ವಿರೋಧಿಸಿ ವಿವಿಧ ರಾಜ್ಯಗಳಲ್ಲಿ ಹಿಂಸಾಕೃತ್ಯಗಳು ನಡೆದ ವಾರದ ನಂತರ ನೇಮಕ ಪ್ರಕ್ರಿಯೆ ಆರಂಭವಾಗಿದೆ.
‘ಅಗ್ನಿವೀರವಾಯು’ ಹುದ್ದೆಗೆ ಹೆಸರು ನೋಂದಣಿ ಪ್ರಕ್ರಿಯೆ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಆರಂಭವಾಗಿದೆ’ ಎಂದು ವಾಯುಪಡೆ ಟ್ವೀಟ್ ಮಾಡಿದೆ. ಅಗ್ನಿಪಥ ಯೋಜನೆಯಡಿ ನೇಮಕವಾದವರನ್ನು ‘ಅಗ್ನಿವೀರ’ರು ಎಂದು ಗುರುತಿಸಲಾಗುತ್ತದೆ.
ಕೇಂದ್ರ ಸರ್ಕಾರ ಜೂನ್ 14ರಂದು ಅಗ್ನಿಪಥ ಯೋಜನೆ ಪ್ರಕಟಿಸಿತ್ತು. ನಾಲ್ಕು ವರ್ಷಗಳ ಅವಧಿಗೆ ಹದಿನೇಳೂವರೆ ವರ್ಷದಿಂದ 21 ವರ್ಷದವರೆಗಿನವರನ್ನು ನೇಮಿಸಲಾಗುತ್ತದೆ. ಅವಧಿ ಮುಗಿದ ತರುವಾಯ ಇವರಲ್ಲಿ ಶೇ 25ರಷ್ಟು ಜನರನ್ನು ಸೇನೆಗೆ ಪೂರ್ಣಾವಧಿಗೆ ನೇಮಿಸಿಕೊಳ್ಳಲಾಗುವುದು ಎಂದು ಸರ್ಕಾರ ಪ್ರಕಟಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.