ನವದೆಹಲಿ: ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಭಾರತೀಯ ಜನತಾ ಪಕ್ಷ ದುರ್ಯೋಧನನಂತೆ ದುರಹಂಕಾರಿ ಎಂದಿದ್ದಾರೆ.
ಎರಡು ದಿನಗಳ ಹಿಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಭ್ರಷ್ಟಾಚಾರಿ ನಂ.1 ಎಂದಿದ್ದರು ನರೇಂದ್ರ ಮೋದಿ. ಮೋದಿ ಹೇಳಿಕೆ ವಿರುದ್ದ ವಾಗ್ದಾಳಿ ನಡೆಸಿದ ಪ್ರಿಯಾಂಕಾ, ಈ ದೇಶ ಯಾವತ್ತೂ ದುರಹಂಕಾರವನ್ನು ಸಹಿಸಿಕೊಂಡಿಲ್ಲ.ದುರ್ಯೋಧನನಿಗೂ ಇದೇ ರೀತಿಯ ದುರಹಂಕಾರವಿತ್ತು. ಆತ ಶೀಕೃಷ್ಣನನ್ನೇ ಒತ್ತೆಯಾಳು ಆಗಿರಿಸಲುಯತ್ನಿಸಿದವನು ಎಂದಿದ್ದಾರೆ.
ಹರ್ಯಾಣದ ಅಂಬಾಲದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಮಾರಿ ಸೆಲ್ಜಾ ಪರ ಚುನಾವಣಾ ಪ್ರಚಾರ ಮಾಡಿದ ಪ್ರಿಯಾಂಕಾ, ಪ್ರಸಿದ್ಧ ಕವಿ ರಾಮ್‌ಧಾರಿ ಸಿಂಗ್ ದಿನಕರ್ ಅವರ ಕವಿತೆಯ ಸಾಲನ್ನು ಉಲ್ಲೇಖಿಸಿದ್ದಾರೆ.ವಿನಾಶ ಹತ್ತಿರ ಬರುತ್ತಿದ್ದಂತೆ ಮನುಷ್ಯ ವಿವೇಕ ಕಳೆದುಕೊಳ್ಳುತ್ತಾನೆ(ಜಬ್ ನಾಶ್ ಮನುಜ್ ಪರ್ ಚಾತಾ ಹೈ, ಪೆಹಲೇ ವಿವೇಕ್ ಮರ್ ಜಾತಾ ಹೈ) ಎಂಬ ಸಾಲನ್ನು ಹೇಳಿದ ಪ್ರಿಯಾಂಕಾ, ಚುನಾವಣೆಯ ವೇಳೆ ನೀಡಿದ ಭರವಸೆಗಳನ್ನು ಬಿಜೆಪಿ ಪೂರೈಸಿಲ್ಲ, ಅದರ ಬದಲಾಗಿ ಅವರು ಹುತಾತ್ಮರ ಹೆಸರಿನಲ್ಲಿ ಅಥವಾ ನನ್ನ ಕುಟುಂಬದ ಹುತಾತ್ಮರನ್ನು ಹಂಗಿಸಿ ಮತ ಕೇಳುತ್ತಿದ್ದಾರೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.