ADVERTISEMENT

370ನೇ ವಿಧಿ ರದ್ದತಿ ಸಂಸತ್ತಿನ ನಿರ್ಣಯ, ದೇವರದ್ದಲ್ಲ: ಒಮರ್‌ ಅಬ್ದುಲ್ಲಾ

ಪಿಟಿಐ
Published 17 ಸೆಪ್ಟೆಂಬರ್ 2024, 11:53 IST
Last Updated 17 ಸೆಪ್ಟೆಂಬರ್ 2024, 11:53 IST
ಒಮರ್‌ ಅಬ್ದುಲ್ಲಾ
ಒಮರ್‌ ಅಬ್ದುಲ್ಲಾ   

ಪಿಟಿಐ

ಬುದ್ಗಾಂ /(ಜಮ್ಮು–ಕಾಶ್ಮೀರ): ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿಯು ಸಂಸತ್ತಿನ ನಿರ್ಣಯವೇ ಹೊರತು ದೇವರ ನಿರ್ಣಯ ಅಲ್ಲ. ಅದನ್ನು ಬದಲಾಯಿಸಬಹುದು; ಯಾವುದೂ ಅಸಾಧ್ಯವಲ್ಲ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ಉಪಾಧ್ಯಕ್ಷ ಒಮರ್‌ ಅಬ್ದುಲ್ಲಾ ಅವರು ಮಂಗಳವಾರ ಹೇಳಿದರು.

ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ನ್ಯಾಯಪೀಠವು ರದ್ದತಿ ಪರವಾಗಿ ತೀರ್ಪು ನೀಡಿದರೆ, ಏಳು ನ್ಯಾಯಮೂರ್ತಿಗಳನ್ನು ಒಳಗೊಂಡ ನ್ಯಾಯಪೀಠವು ನಾಳೆ ಮತ್ತೊಮ್ಮೆ ವಿಷಯದ ಪರವಾಗಿ ತೀರ್ಪು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.

ADVERTISEMENT

‘370ನೇ ವಿಧಿ ಎಂಬುದು ಇತಿಹಾಸ. ಅದು ಎಂದಿಗೂ ಭಾರತ ಸಂವಿಧಾನದ ಭಾಗವಾಗುವುದಿಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಹೇಳಿಕೆಗೆ ತಿರುಗೇಟು ನೀಡಿದರು. 

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳು ಹೆಚ್ಚುತ್ತಿರುವುದಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೇ ಹೊಣೆ ಎಂದು ಆರೋಪಿಸಿದರು.

‘ಆರು ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರವು ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ. ಇಲ್ಲಿ ಮತ್ತೆ ಭಯೋತ್ಪಾದಕ ಕೃತ್ಯಗಳು ನಡೆಯುತ್ತಿವೆ, ಯಾತ್ರಾರ್ಥಿಗಳು ಮತ್ತು ಸೈನಿಕರ ಮೇಲೆ ದಾಳಿಗಳು ನಡೆಯುತ್ತಿವೆ, ಅಧಿಕಾರಿಗಳು ಸೈನಿಕರ ಹತ್ಯೆಗಳಾಗುತ್ತಿವೆ ಎಂದರೆ ಅದಕ್ಕೆ ಯಾರು ಹೊಣೆ’ ಎಂದು ಪ್ರಶ್ನಿಸಿದರು.

ಜನರು ಎನ್‌ಸಿ–ಕಾಂಗ್ರೆಸ್‌ ಮೈತ್ರಿಗೆ ಸ್ಪಷ್ಟ ಬಹುಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಬ್ದುಲ್ಲಾ ಅವರು ಬುದ್ಗಾಂ ಮತ್ತು ಗಾಂದರಬಲ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.