ನವದೆಹಲಿ: ಕಳೆದ ಮೂರು ತಿಂಗಳಿಂದ ಅನಾರೋಗ್ಯ ಕಾರಣ ರಜೆಯಲ್ಲಿದ್ದ ಅರುಣ್ ಜೇಟ್ಲಿ ಗುರುವಾರ ಮತ್ತೆ ಹಣಕಾಸು ಸಚಿವರಾಗಿ ಕಚೇರಿಗೆ ಮರಳಿದ್ದಾರೆ.
ಮೂತ್ರಪಿಂಡ ಸಮಸ್ಯೆಯಿದ ಬಳಲುತ್ತಿದ್ದ ಅರುಣ್ ಜೇಟ್ಲಿ ಮೇ 17ರಂದ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದರು. ವೈದ್ಯರ ಸಲಹೆಯಂತೆ ಮೂರು ತಿಂಗಳಿಂದ ವಿಶ್ರಾಂತಿ ಪಡೆಯುತ್ತಿದ್ದರು.
ಸಂಪೂರ್ಣ ಗುಣಮುಖರಾಗಿರುವ ಅರುಣ್ ಜೇಟ್ಲಿ ಇಲ್ಲಿನ ಸಂಸತ್ತಿನ ಉತ್ತರ ಬ್ಲಾಕ್‌ನಲ್ಲಿರುವ ಹಣಕಾಸು ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಣಕಾಸು ಖಾತೆಯ ಜತೆ ಕಾರ್ಪೊರೇಟ್ ವ್ಯವಹಾರಗಳ ಖಾತೆಯನ್ನು ನೋಡಿಕೊಳ್ಳುತ್ತಿದ್ದಾರೆ.
ಜೇಟ್ಲಿ ರಜೆಯಲ್ಲಿದ್ದಾಗ ಈ ಎರಡ ಖಾತೆಗಳನ್ನು ಪಿಯೂಶ್ ಗೋಯಲ್ ನೋಡಿಕೊಳ್ಳುತ್ತಿದ್ದರು. ಈ ಎರಡು ಖಾತೆಗಳ ಹೊಣೆಯನ್ನು ಅರುಣ್ ಜೇಟ್ಲಿ ಅವರಿಗೆ ವಹಿಸಿಕೊಟ್ಟರು.
2019ಕ್ಕೆ ಲೋಕಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲ ಹೊಸ ಆರ್ಥಿಕ ಯೋಜನೆಗಳನ್ನು ಸಿದ್ಧಪಡಿಸುವ ಗುರುತರ ಜವಾಬ್ದಾರಿ ಜೇಟ್ಲಿ ಮೇಲೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.