ADVERTISEMENT

ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೇಮಾ ಖಂಡು ಅವರಿಗೆ ಕೋವಿಡ್ ನೆಗೆಟಿವ್ 

ಪಿಟಿಐ
Published 17 ಸೆಪ್ಟೆಂಬರ್ 2020, 13:49 IST
Last Updated 17 ಸೆಪ್ಟೆಂಬರ್ 2020, 13:49 IST
ಪೇಮಾ ಖಂಡು
ಪೇಮಾ ಖಂಡು   

ಇಟಾನಗರ್: ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೇಮಾ ಖಂಡು ಅವರು ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ.

ಸೆಪ್ಟೆಂಬರ್ 15ರಂದು ಇವರಿಗೆ ಕೋವಿಡ್ ಸೋಂಕುಇರುವುದು ದೃಢಪಟ್ಟಿತ್ತು. ಸದ್ಯ ದೆಹಲಿಯಲ್ಲಿ ಹೋಮ್ ಐಸೋಲೇಷನ್‌ನಲ್ಲಿರುವ ಪೇಮಾ ಅವರಿಗೆ ಬುಧವಾರ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ವರದಿ ನೆಗೆಟಿವ್ ಬಂದಿದೆ.

ನಿನ್ನೆ ನಾನು ಮತ್ತೊಮ್ಮೆ ಕೋವಿಡ್ 19 ಆರ್‌ಟಿ ಪಿಸಿಆರ್ ಪರೀಕ್ಷೆಗೊಳಗಾಗಿದ್ದೆ.ನಿಮ್ಮ ಹಾರೈಕೆ ಮತ್ತು ಪ್ರಾರ್ಥನೆಯಿಂದ ವರದಿ ನೆಗೆಟಿವ್ ಬಂದಿದೆ, ಎಲ್ಲರಿಗೂ ಧನ್ಯವಾದಗಳು ಎಂದು ಪೇಮಾ ಟ್ವೀಟಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.