ADVERTISEMENT

ಲೇಖಕಿ, ಹೋರಾಟಗಾರ್ತಿ ಅರುಂಧತಿಗೆ ‘ಪೆನ್‌ ಪಿಂಟರ್‌’ ಗೌರವ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 14:05 IST
Last Updated 27 ಜೂನ್ 2024, 14:05 IST
 ಅರುಂಧತಿ ರಾಯ್
 ಅರುಂಧತಿ ರಾಯ್   

ಲಂಡನ್‌: ಲೇಖಕಿ, ಹೋರಾಟಗಾರ್ತಿ ಅರುಂಧತಿ ರಾಯ್ ಅವರು 2024ರ ಸಾಲಿನ ಪ್ರತಿಷ್ಠಿತ ‘ಪೆನ್‌ ಪಿಂಟರ್‌’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನೊಬೆಲ್‌ ಪ್ರಶಸ್ತಿ ವಿಜೇತ ಸಾಹಿತಿ ಹೆರಾಲ್ಡ್‌ ಪಿಂಟರ್‌ ಅವರ ಸ್ಮರಣಾರ್ಥ ‘ಇಂಗ್ಲಿಷ್‌ ಪೆನ್‌’ ಸಂಸ್ಥೆಯು 2009 ರಲ್ಲಿ ಸ್ಥಾಪಿಸಿರುವ ಈ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದವರಿಗೆ ನೀಡಲಾಗುತ್ತದೆ.

‘ಪೆನ್‌ ಪಿಂಟರ್‌ ಪ್ರಶಸ್ತಿ ಸ್ವೀಕರಿಸಲು ನನಗೆ ಸಂತಸವಾಗುತ್ತಿದೆ. ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಬರೆಯಲು ಹೆರಾಲ್ಡ್‌ ಪಿಂಟರ್‌ ಅವರು ಇಂದು ನಮ್ಮೊಂದಿಗೆ ಇರಬೇಕಿತ್ತು ಎಂದು ಬಯಸುತ್ತೇನೆ. ಅವರು ಇಲ್ಲದಿರುವುದರಿಂದ, ಅವರ ಸ್ಥಾನವನ್ನು ತುಂಬಲು ನಮ್ಮಲ್ಲಿ ಕೆಲವರು ಕೈಲಾದಷ್ಟು ಪ್ರಯತ್ನಿಸಬೇಕು’ ಎಂದು ಅರುಂಧತಿ ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘ಅರುಂಧತಿ ರಾಯ್ ಅವರು ಈ ಪ್ರತಿಷ್ಠಿತ ಪ್ರಶಸ್ತಿಗೆ ಒಮ್ಮತದಿಂದ ಆಯ್ಕೆಯಾಗಿದ್ದಾರೆ. ಸಾಹಿತ್ಯಕ್ಕೆ ಅವರು ನೀಡಿರುವ ಅಪ್ರತಿಮ ಕೊಡುಗೆಯನ್ನು ಇದು ಸೂಚಿಸುತ್ತದೆ’ ಎಂದು ಆಯ್ಕೆ ಸಮಿತಿಯಲ್ಲಿದ್ದ ಸಂಗೀತಗಾರ ರೋಜರ್‌ ರಾಬಿನ್ಸನ್‌ ಹೇಳಿದ್ದಾರೆ.

62 ವರ್ಷದ ಅರುಂಧತಿ ಅವರು ಬ್ರಿಟಿಷ್‌ ಲೈಬ್ರರಿ ಸಹಯೋಗದಲ್ಲಿ ಅ.10ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. 2010ರಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಕ್ಕಾಗಿ ಅರುಂಧತಿ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ (ಯುಎಪಿಎ) ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.