ADVERTISEMENT

ದೆಹಲಿ | ಸಿಎಂ ಅರವಿಂದ ಕೇಜ್ರಿವಾಲ್‌ ಬಂಧನ: ಎಎಪಿಯಿಂದ ಸಹಿ ಸಂಗ್ರಹ ಅಭಿಯಾನ

ಪಿಟಿಐ
Published 2 ಮೇ 2024, 10:22 IST
Last Updated 2 ಮೇ 2024, 10:22 IST
ಎಎಪಿ ಚಿಹ್ನೆ
ಎಎಪಿ ಚಿಹ್ನೆ   

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಬಂಧನವನ್ನು ಖಂಡಿಸಿರುವ ಆಮ್‌ ಆದ್ಮಿ ಪಕ್ಷ (ಎಎಪಿ) ಇಂದು (ಗುರುವಾರ) ಸಹಿ ಸಂಗ್ರಹ ಅಭಿಯಾನವನ್ನು ಪ್ರಾರಂಭಿಸಿದೆ.

ಕೇಜ್ರಿವಾಲ್‌ ಕುರಿತು ಜನರು ತಮ್ಮ ಸಂದೇಶಗಳನ್ನು ಬರೆಯಲು ಲಜಪತ್‌ ನಗರದಲ್ಲಿ ಎರಡು ಬಿಳಿಯ ಫಲಕಗಳನ್ನು ಅಳವಡಿಸಲಾಗಿದೆ.

ದೆಹಲಿಯ ಜನತೆ ತಮ್ಮ ಮುಖ್ಯಮಂತ್ರಿಯನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದನ್ನು ಬಿಜೆಪಿಗೆ ತೋರಿಸಲು ನಗರದ ವಿವಿಧೆಡೆ ಸಹಿ ಸಂಗ್ರಹ ಅಭಿಯಾನವನ್ನು ‌ಹಮ್ಮಿಕೊಳ್ಳಲಾಗಿದೆ. ಜನರ ಸಹಿಯನ್ನು ಸಂಗ್ರಹಿಸಿ ಬಿಜೆಪಿಗೆ ಕಳುಹಿಸುತ್ತೇವೆ ಎಂದು ಜಂಗ್‌ಪುರದ ಶಾಸಕ ಪ್ರವೀಣ್‌ ಕುಮಾರ್‌ ಹೇಳಿದ್ದಾರೆ.

ADVERTISEMENT

ಸಿಎಂ ಕೇಜ್ರಿವಾಲ್‌ ಅವರನ್ನು ಬಂಧಿಸಿ ಜೈಲಿನಲ್ಲಿ ಇರಿಸಿರುವುದಕ್ಕೆ ದೆಹಲಿಯ ಜನತೆ ತೀವ್ರ ಕೋಪಗೊಂಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ತಮ್ಮ ಮತಗಳ ಮೂಲಕ ಸಿಎಂ ಬಂಧನ ಹಾಗೂ ಸರ್ವಾಧಿಕಾರಿ ಆಡಳಿತಕ್ಕೆ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ದೆಹಲಿ ಪೂರ್ವ ಲೋಕಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ಕುಲದೀಪ್‌ ಕುಮಾರ್‌ ಹೇಳಿದ್ದಾರೆ.

ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಮಾರ್ಚ್‌ 21ರಂದು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಕೇಜ್ರಿವಾಲ್‌ ಸದ್ಯ ತಿಹಾರ್‌ ಜೈಲಿನಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.