ಗೋಪೇಶ್ವರ (ಉತ್ತರಾಖಂಡ): ಸಾಮಾಜಿಕ ಕಾರ್ಯಗಳಿಗಾಗಿಯೇ ತಮ್ಮ ಬದುಕನ್ನು ಮುಡುಪಾಗಿಟ್ಟಿದ್ದ ಸರ್ವೋದಯ ಹಾಗೂ ಚಿಪ್ಕೊ ಚಳವಳಿಯ ನಾಯಕ ಮುರಾರಿ ಲಾಲ್ (91) ಅವರು ರಿಷಿಕೇಶದ ಏಮ್ಸ್‌ನಲ್ಲಿ ಶುಕ್ರವಾರ ನಿಧನರಾದರು.
ಉಸಿರಾಟದ ತೊಂದರೆಯಿಂದ ಮೂರು ದಿನದ ಹಿಂದೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಏಮ್ಸ್) ಚಿಕಿತ್ಸೆಗಾಗಿ ಅವರು ದಾಖಲಾಗಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಲಾಲ್ ಅವರು ಚಿಪ್ಕೊ ಚಳವಳಿಯ ಮಾತೃ ಸಂಘಟನೆಯಾದ ದಶೋಲಿ ಗ್ರಾಮ ಸ್ವರಾಜ್ಯ ಮಂಡಲದ ಅಧ್ಯಕ್ಷರಾಗಿದ್ದರು.
ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಬಳಕೆಯಲ್ಲಿ ನವೀನ ಮಾದರಿಗಳನ್ನು ರೂಪಿಸುವ ಮೂಲಕ ಖ್ಯಾತರಾಗಿದ್ದ ಲಾಲ್, ತನ್ನೂರಿನ ಬಂಜರು ಭೂಮಿಯನ್ನು ಹಸಿರಾಗಿಸಿದ್ದರು. ಇವರ ಕೆಲಸವನ್ನು ಉತ್ತರಾಖಂಡ ಸರ್ಕಾರ ಹಾಗೂ ದೇಶದಾದ್ಯಂತ ಅನೇಕ ಸಂಸ್ಥೆಗಳು ಗುರುತಿಸಿ ಗೌರವಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.