ADVERTISEMENT

ಕೇರಳದಲ್ಲಿ ಮುಂದುವರಿದ ನೈರುತ್ಯ ಮುಂಗಾರು: ಸುರಕ್ಷಿತವಾಗಿರಲು ಜನರಿಗೆ ಸೂಚನೆ

ಪಿಟಿಐ
Published 2 ಜೂನ್ 2024, 11:20 IST
Last Updated 2 ಜೂನ್ 2024, 11:20 IST
<div class="paragraphs"><p>ಕೇರಳದಲ್ಲಿ ಮುಂದುವರಿದ ನೈರುತ್ಯ ಮುಂಗಾರು:&nbsp;ಸುರಕ್ಷಿತವಾಗಿರಲು ಜನರಿಗೆ ಸೂಚನೆ</p></div>

ಕೇರಳದಲ್ಲಿ ಮುಂದುವರಿದ ನೈರುತ್ಯ ಮುಂಗಾರು: ಸುರಕ್ಷಿತವಾಗಿರಲು ಜನರಿಗೆ ಸೂಚನೆ

   

ತಿರುವನಂತಪುರ: ಕೇರಳದಾದ್ಯಂತ ನೈರುತ್ಯ ಮುಂಗಾರಿನ ಮಳೆಯ ಅಬ್ಬರ ಮುಂದುವರಿದಿದೆ. ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿರುವ ಕಾರಣ ಎರ್ನಾಕುಲಂ ಜಿಲ್ಲೆಗೆ ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌ ಘೋಷಿಸಿದೆ.

ಪಟ್ಟಣಂತಿಟ್ಟ, ಆಲಪ್ಪುಳ, ಇಡುಕ್ಕಿ, ವಯನಾಡು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಿಸಿದೆ.

ADVERTISEMENT

ಹವಾಮಾನ ಇಲಾಖೆ ಮುನ್ಸೂಚನೆ ಹಿನ್ನೆಲೆ ರಾಜ್ಯ ವಿಪತ್ತು ನಿರ್ವಹಣಾ ತಂಡ ಭೂಕುಸಿತ ಸಂಭವಿಸುವ ಗುಡ್ಡಗಾಡು ಪ್ರದೇಶಗಳಲ್ಲಿರುವ ಜನರಿಗೆ ಸುರಕ್ಷತಾ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಸೂಚಿಸಿದೆ. ಜತೆಗೆ ಭಾರಿ ಪ್ರಮಾಣದಲ್ಲಿ ಗಾಳಿ ಬೀಸುವ ಮುನ್ಸೂಚನೆ ಇರುವ ಕಾರಣ ಗುಡ್ಡಗಾಡು ಪ್ರದೇಶದಲ್ಲಿ ರಾತ್ರಿ ವೇಳೆ ಸಂಚಾರ ಕೈಗೊಳ್ಳದಂತೆ ನಾಗರಿಕರಿಗೆ ಎಚ್ಚರಿಕೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.