ADVERTISEMENT

ಜೆಇಎಂ ಉಗ್ರ ಮಸೂದ್ ಅಜರ್ ‘ಮೌಲಾನಾ’ ಅಲ್ಲ ’ಸೈತಾನ’: ಓವೈಸಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2019, 10:07 IST
Last Updated 24 ಫೆಬ್ರುವರಿ 2019, 10:07 IST
   

ಮುಂಬೈ: ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್ ಮುಸ್ಲಿಮೀನ್ (ಎಐಎಂಐಎಂ)ನ ಮುಖ್ಯಸ್ಥ ಅಸಾದುದ್ದೀನ್ ಓವೈಸಿಪುಲ್ವಾಮಾ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು ಉಗ್ರ ಮಸೂದ್ ಅಜರ್ ‘ಮೌಲಾನಾ’ ಅಲ್ಲ ’ಸೈತಾನ’ ಎಂದು ಹೇಳಿದ್ದಾರೆ.

ಮುಂಬೈನಲ್ಲಿ ನಡೆದ ಸಮಾವೇಶವೊಂದರಲ್ಲಿ ಮಾತನಾಡಿದ ಅವರು ಪುಲ್ವಾಮಾ ದಾಳಿಯಲ್ಲಿ ಪಾಕ್‌ ಸರ್ಕಾರದ ಕೈವಾಡ ಇದೆ. ಐಎಸ್‌ಐ ಹಾಗೂ ಪಾಕಿಸ್ತಾನ ಸೇನೆಯ ನೆರವಿನಿಂದ ಈ ದಾಳಿ ನಡೆಸಲಾಗಿದೆ ಎಂದು ಅವರು ಪಾಕಿಸ್ತಾನ ವಿರುದ್ಧ ಹರಿಹಾಯ್ದರು.

ಜೈಷ್-ಇ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯಮಸೂದ್ ಅಜರ್ ಮೌಲಾನಾ ಒಬ್ಬ ಸೈತಾನ, ಹಾಗೇ ಆ ಉಗ್ರ ಸಂಘಟನೆಯು ಜೈಷ್‌–ಇ–ಮೊಹಮ್ಮದ್‌ ಅಲ್ಲ ಅದು ಜೈಷ್‌–ಇ–ಸೈತಾನ್‌ ಎಂದು ಓವೈಸಿ ಟೀಕಿಸಿದರು.

ADVERTISEMENT

ಭಾರತೀಯರು ಯಾವಾಗಲೂ ಒಂದೇ ಎಂಬುದನ್ನು ನೀವು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಈ ದಾಳಿಯ ಹೊಣೆ ಹೊತ್ತು ಉಗ್ರ ಚಟುವಟಿಕೆಗಳನ್ನು ನಿಲ್ಲಿಸಿ ಎಂದು ಓವೈಸಿ ಪಾಕಿಸ್ತಾನಕ್ಕೆ ತಾಕಿತ್ತು ಮಾಡಿದರು.

ಇದೇ ವೇಳೆ ಕೇಂದ್ರ ಸರ್ಕಾರದ ಭದ್ರತಾ ವೈಪಲ್ಯದಿಂದಲೇ ಪುಲ್ವಾಮಾ ದಾಳಿ ನಡೆದಿರುವುದಕ್ಕೆ ಸಾಕ್ಷಿ ಎಂದರು. ಕೇಂದ್ರ ಹಾಗೂ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರಗಳು ಅಭಿವೃದ್ಧಿ ಕಡೆ ಗಮನ ನೀಡುತ್ತಿಲ್ಲ ಎಂದು ಓವೈಸಿ ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.