ADVERTISEMENT

ಆಸಿಯಾನ್‌ ಶೃಂಗಸಭೆ: ಕೊರೊನಾ ಕಾಲದ ಸವಾಲುಗಳ ಚರ್ಚೆ

ಪಿಟಿಐ
Published 12 ನವೆಂಬರ್ 2020, 8:37 IST
Last Updated 12 ನವೆಂಬರ್ 2020, 8:37 IST
ಆಗ್ನೇಯ ಏಷ್ಯಾ ರಾಷ್ಟ್ರಗಳ ಪ್ರಾದೇಶಿಕ ಶೃಂಗಸಭೆಯಲ್ಲಿ ವಿಯೆಟ್ನಾಂ ಪ್ರಧಾನಿ ಗುಯೆನ್ ಕ್ಸುವಾನ್ ಪುಕ್ ಮಾತನಾಡಿದರು.
ಆಗ್ನೇಯ ಏಷ್ಯಾ ರಾಷ್ಟ್ರಗಳ ಪ್ರಾದೇಶಿಕ ಶೃಂಗಸಭೆಯಲ್ಲಿ ವಿಯೆಟ್ನಾಂ ಪ್ರಧಾನಿ ಗುಯೆನ್ ಕ್ಸುವಾನ್ ಪುಕ್ ಮಾತನಾಡಿದರು.   

ಹನೊಯಿ: ಇಲ್ಲಿ ಗುರುವಾರ ಆರಂಭವಾದ ದಕ್ಷಿಣ ಏಷ್ಯಾ ರಾಷ್ಟ್ರಗಳ ಪ್ರಾದೇಶಿಕ ಶೃಂಗಸಭೆಯಲ್ಲಿ(ಎಎಸ್‌ಇಎಎನ್‌) ವಿಯೆಟ್ನಾಂ ಪ್ರಧಾನಿ ಗುವೆನ್ ಕ್ಸುವೆನ್ ಪುಕ್ ಅವರು, ಕೊರೊನಾ ಸಾಂಕ್ರಾಮಿಕದಿಂದ ಈ ವರ್ಷ ಆಗ್ನೇಯ ಏಷ್ಯಾ ರಾಷ್ಟ್ರಗಳು ಎದುರಿಸುತ್ತಿರುವ ಸವಾಲುಗಳನ್ನು ತೆರೆದಿಟ್ಟರು.

ಈ ವರ್ಷದ ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘದ ದ್ವೈವಾರ್ಷಿಕ ಶೃಂಗ ಸಭೆಯ ಅಧ್ಯಕ್ಷತೆಯನ್ನು ವಿಯೆಟ್ನಾಂ ವಹಿಸಿಕೊಂಡಿದೆ.

ಶೃಂಗಸಭೆಯ ಉದ್ಘಾಟನಾ ಸಮಾರಂಭದಲ್ಲಿ ವಿಯೆಟ್ನಾಂ ಪ್ರಧಾನಿ ಗುವೆನ್ ಕ್ಸುವನ್ ಫುಕ್ ಅವರು ಈ ವರ್ಷದಲ್ಲಿ ಎದುರಿಸಿದ ಆರೋಗ್ಯ ಬಿಕ್ಕಟ್ಟು ಮತ್ತು ಪ್ರಾದೇಶಿಕ ಅಸ್ಥಿರತೆ ಮತ್ತು ಸವಾಲುಗಳನ್ನು ವಿವರಿಸಿದರು.

ADVERTISEMENT

ಈ ಸಭೆಯಲ್ಲಿ ದಕ್ಷಿಣ ಚೀನಾದ ಸಮುದ್ರದಲ್ಲಿ ಉಂಟಾಗಿರುವ ವಿವಾದಗಳು, ಕೊರೊನಾ ವೈರಸ್ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದ ವಿಚಾರಗಳನ್ನು ಚರ್ಚಿಸುವ ಸಾಧ್ಯತೆ ಇದೆ. ಕಾಂಬೋಡಿಯಾದ ಉಪ ಪ್ರಧಾನಿ ಹುನ್‌ಸೇನ್, ಕೊರೊನಾ ಸೋಂಕಿತದ ಸಚಿವರೊಂದಿಗೆ ಸಂಪರ್ಕವಿದ್ದಿದ್ದರಿಂದ, ಸ್ವಯಂ ಪ್ರೇರಿತರಾಗಿ ಮನೆಯಲ್ಲೇ ಕ್ವಾರಂಟೈನ್ ಆಗಿದ್ದರು.

ಕೋವಿಡ್‌ ಕಾರಣದಿಂದಾಗಿ, ಈ ಶೃಂಗಸಭೆಯ ಕಾರ್ಯಕ್ರಮವನ್ನು ಆನ್‌ಲೈನ್‌ನಲ್ಲಿ ಪ್ರಸಾರ ಮಾಡಲಾಗುತ್ತಿದ್ದು, ಆಗ್ನೇಯ ಏಷ್ಯಾ ರಾಷ್ಟ್ರಗಳ ನಾಯಕರು, ತಮ್ಮ ದೇಶದಲ್ಲೇ ಕುಳಿತು ಸಭೆಯನ್ನು ವೀಕ್ಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.