ADVERTISEMENT

ಹರಿದ್ವಾರದ ಗಂಗಾ ನದಿಯಲ್ಲಿ ಜನರಲ್ ಬಿಪಿನ್ ರಾವತ್ ದಂಪತಿ ಅಸ್ಥಿ ವಿಸರ್ಜನೆ

ಪಿಟಿಐ
Published 11 ಡಿಸೆಂಬರ್ 2021, 13:43 IST
Last Updated 11 ಡಿಸೆಂಬರ್ 2021, 13:43 IST
ಹರಿದ್ವಾರದ ಗಂಗಾ ನದಿಯಲ್ಲಿ ಜನರಲ್ ರಾವತ್ ಅವರ ಅಸ್ಥಿ ವಿಸರ್ಜಿಸಿದ ಪುತ್ರಿ ಕೃತಿಕಾ
ಹರಿದ್ವಾರದ ಗಂಗಾ ನದಿಯಲ್ಲಿ ಜನರಲ್ ರಾವತ್ ಅವರ ಅಸ್ಥಿ ವಿಸರ್ಜಿಸಿದ ಪುತ್ರಿ ಕೃತಿಕಾ   

ಡೆಹ್ರಾಡೂನ್: ಸೇನಾ ಹೆಲಿಕಾಪ್ಟರ್ ಪತನದಲ್ಲಿ ನಿಧನರಾಗಿದ್ದ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ಅವರ ಅಸ್ಥಿಯನ್ನು ಹರಿದ್ವಾರದ ಗಂಗಾ ನದಿಯಲ್ಲಿ ವಿಸರ್ಜಿಸಲಾಯಿತು.

ಅರ್ಚಕರಾದ ಆದಿತ್ಯ ವಸಿಷ್ಠ ಮತ್ತು ಪರಿಕ್ಷಿತ್ ಶಿಕೋಲಾ ಅವರು ವಿಧಿ ವಿಧಾನಗಳನ್ನು ನೆರವೇರಿಸಿದರು. ಸಕಲ ಮಿಲಿಟರಿ ಗೌರವಗಳೊಂದಿಗೆ ಜನರಲ್ ರಾವತ್ ಮತ್ತು ಅವರ ಪತ್ನಿಯ ಚಿತಾಭಸ್ಮವನ್ನು ಅವರ ಪುತ್ರಿಯರಾದ ತಾರಿಣಿ ಮತ್ತು ಕೃತಿಕಾ ನದಿಯಲ್ಲಿ ವಿಸರ್ಜಿಸಿದರು.

ಉತ್ತರಾ ಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಚೌಧರಿ ಚರಣ್ ಸಿಂಗ್ ಘಾಟ್ (VIP Ghat) ಬಳಿ ರಾವತ್ ಅವರ ಇಬ್ಬರು ಪುತ್ರಿಯರನ್ನು ಭೇಟಿ ಮಾಡಿದರು.

ADVERTISEMENT

'ಜನರಲ್ ರಾವತ್ ಅವರು ಜನರ ನೆನಪಿನಲ್ಲಿ ಸದಾ ಉಳಿಯುತ್ತಾರೆ' ಎಂದು ಹೇಳಿದರು.

ಭಾರತದ ಮೊದಲ ಸಿಡಿಎಸ್ ಜನರಲ್ ರಾವತ್ ಮತ್ತು ಪತ್ನಿ ಮಧುಲಿಕಾ ಸೇರಿದಂತೆ ಇತರೆ 11 ಜನರು ತಮಿಳುನಾಡಿನ ಕೂನೂರು ಬಳಿ ಡಿಸೆಂಬರ್ 08ರಂದು ನಡೆದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಸಾವಿಗೀಡಾಗಿದ್ದರು.

ದೆಹಲಿಯ ಬ್ರಾರ್ ಸ್ಕ್ವೇರ್ ಚಿತಾಗಾರದಲ್ಲಿ ಸಕಲ ಮಿಲಿಟರಿ ಗೌರವಗಳೊಂದಿಗೆ ಶುಕ್ರವಾರ (ಡಿ.10) ಅಂತ್ಯಕ್ರಿಯೆ ನೆರವೇರಿತು. ರಾವತ್ ಅವರು ಉತ್ತರಾಖಂಡದ ಪೌರಿ ಜಿಲ್ಲೆಯ ಸೈನಾ ಗ್ರಾಮದವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.