ADVERTISEMENT

Gyanvapi ASI survey: ಮಸೀದಿ ಸಮೀಕ್ಷೆ ಕಾರ್ಯ ಇನ್ನೂ ಕೆಲದಿನ ಮುಂದುವರಿಕೆ

ಪಿಟಿಐ
Published 7 ಆಗಸ್ಟ್ 2023, 13:08 IST
Last Updated 7 ಆಗಸ್ಟ್ 2023, 13:08 IST
ವಾರಾಣಸಿಯ ಜ್ಞಾನವಾಪಿ ಮಸೀದಿ ಆವರಣದಲ್ಲಿ ಸಮೀಕ್ಷೆ ನಡೆಸಲು ಸೋಮವಾರ ಭೇಟಿ ನೀಡಿದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು
ವಾರಾಣಸಿಯ ಜ್ಞಾನವಾಪಿ ಮಸೀದಿ ಆವರಣದಲ್ಲಿ ಸಮೀಕ್ಷೆ ನಡೆಸಲು ಸೋಮವಾರ ಭೇಟಿ ನೀಡಿದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು   ಪಿಟಿಐ ಚಿತ್ರ

ವಾರಾಣಸಿ: ಹೈಕೋರ್ಟ್‌ನ ಆದೇಶದಂತೆ ಜ್ಞಾನವಾಪಿ ಮಸೀದಿಯ ಆವರಣದ ಸಮೀಕ್ಷೆ ಕಾರ್ಯವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸೋಮವಾರವೂ ಮುಂದುವರಿಸಿತು. 

ಪ್ರಕರಣದ ಸ್ಥಳದ ಪಕ್ಕದಲ್ಲೇ ಇರುವ ಕಾಶಿ ವಿಶ್ವನಾಥನ ದರ್ಶನಕ್ಕೆ ಭಕ್ತಸಾಗರವೇ ಹರಿದುಬಂದ ಕಾರಣ, ಸಮೀಕ್ಷೆ ಕಾರ್ಯ ಮೂರು ಗಂಟೆ ವಿಳಂಬವಾಗಿ ಆರಂಭಗೊಂಡಿತು. ಮಸೀದಿಯ ಮೂರು ಗುಮ್ಮಟ ಹಾಗೂ ನೆಲಮಾಳಿಗೆಯ ಸಮೀಕ್ಷೆ ಕಾರ್ಯವನ್ನು ಭಾನುವಾರವೇ ಪೂರ್ಣಗೊಳಿಸಲಾಗಿದೆ ಎಂದು ಸರ್ಕಾರಿ ಅಭಿಯೋಜಕ ರಾಜೇಶ್ ಮಿಶ್ರಾ ತಿಳಿಸಿದ್ದಾರೆ.

‘ಸಮೀಕ್ಷೆಯಲ್ಲಿ ಸ್ಥಳದ ನಕ್ಷೆ, ಅದರ ಅಳತೆ ಹಾಗೂ ಛಾಯಾಚಿತ್ರಗಳನ್ನು ದಾಖಲಿಸಲಾಗಿದೆ. ಸಮೀಕ್ಷೆ ಕಾರ್ಯ ಇನ್ನೂ ಕೆಲವು ದಿನ ತೆಗೆದುಕೊಳ್ಳಲಿದೆ’ ಎಂದಿದ್ದಾರೆ.

ADVERTISEMENT

‘ಸಮೀಕ್ಷೆ ಸಂದರ್ಭದಲ್ಲಿ ಹಿಂದು ದೇವರ ಮೂರ್ತಿ ಹಾಗೂ ತ್ರಿಶೂಲ ದೊರೆತಿದೆ ಎಂಬ ವದಂತಿ ಎಲ್ಲೆಡೆ ಹರಿದಾಡಿದೆ. ಅಧಿಕಾರಿಗಳು ಇಂಥ ವದಂತಿಗಳು ಹರಡದಂತೆ ತಡೆಯಬೇಕು. ಇಂಥ ಸುದ್ದಿಗಳು ಸಮಾಜದ ಸ್ವಾಸ್ಥ್ಯ ಕದಡುವ ಅಪಾಯ ಇರುವುದರಿಂದ ಅಧಿಕಾರಿಗಳು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕು’ ಎಂದು ಮುಸ್ಲಿಂ ಸಮುದಾಯದವರು ಆಗ್ರಹಿಸಿದ್ದಾರೆ.

ಇದನ್ನು ಓದಿ: Gyanvapi ASI Survey | ದೇಗುಲವಿದ್ದ ಜಾಗದಲ್ಲಿ ಮಸೀದಿ..?; ಈವರೆಗಿನ ಘಟನಾವಳಿ...

ಜ್ಞಾನವಾಪಿ ಮಸೀದಿಯ ಸಮೀಕ್ಷೆ ಕೈಗೊಳ್ಳಲು ಅಲಹಾಬಾದ್ ಹೈಕೋರ್ಟ್‌ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಲು ನಿರಾಕರಿಸಿದ್ದರಿಂದ ಮಸೀದಿ ಸಮೀಕ್ಷೆ ಕಾರ್ಯ ಆರಂಭಗೊಂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.