ನವದೆಹಲಿ: ಅಸ್ಸಾಮಿನ ಆರು ಬಂಧನ ಕೇಂದ್ರಗಳಲ್ಲಿ ಕಳೆದ ಒಂದು ವರ್ಷದಲ್ಲಿ 10 ವಿದೇಶಿಯರು ಮೃತಪಟ್ಟಿದ್ದಾರೆ ಎಂದು ಗೃಹಸಚಿವಾಲಯ ಲೋಕಸಭೆಗೆ ಮಂಗಳವಾರ ಮಾಹಿತಿ ನೀಡಿದೆ.
ರಾಜ್ಯದ ಆರು ಬಂಧನ ಕೇಂದ್ರಗಳಲ್ಲಿ 3,331 ಜನರು ಇದ್ದಾರೆ. ಶಿಕ್ಷೆಗೊಳಗಾದ ವಿದೇಶಿಯರು ಅಥವಾ ಘೋಷಿಸ ಲ್ಪಟ್ಟ ವಿದೇಶಿಯರು ಇಲ್ಲಿದ್ದಾರೆ.
‘ಅಸ್ಸಾಮಿನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿ ಯಾವುದೇ ಬಂಧನ ಕೇಂದ್ರ ಇಲ್ಲ. ರಾಷ್ಟ್ರೀಯ ಮಾನವಹಕ್ಕು ಗಳ ಆಯೋಗವು ಬಂಧನ ಕೇಂದ್ರಗಳಿಗೆ ಮೂರು ಬಾರಿ ಭೇಟಿ ನೀಡಿ, ಅಲ್ಲಿನ ವಿದೇಶಿ ಪ್ರಜೆಗಳ ಜತೆ ಸಂವಾದ ನಡೆಸಿದೆ’ ಎಂದು ಗೃಹಖಾತೆಯ ರಾಜ್ಯ ಸಚಿವ ಜಿ. ಕೃಷ್ಣನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.