ADVERTISEMENT

ಅಸ್ಸಾಂನ ವಿಜ್ಞಾನಿಗೆ ಅಂತರಾಷ್ಟ್ರೀಯ ಪ್ರಶಸ್ತಿ

ಪಿಟಿಐ
Published 25 ಅಕ್ಟೋಬರ್ 2024, 16:33 IST
Last Updated 25 ಅಕ್ಟೋಬರ್ 2024, 16:33 IST

ಗುವಾಹಟಿ: ಘೇಂಡಾಮೃಗಗಳ ಸಂರಕ್ಷಣೆಗಾಗಿ ಅಸ್ಸಾಂನ ಪ್ರಸಿದ್ಧ ವಿಜ್ಞಾನಿ ಬಿಭಬ್‌ ಕುಮಾರ್‌ ತಾಲುಕ್‌ದಾರ್‌ ಅವರು ಶುಕ್ರವಾರ ‘ದ ಹ್ಯಾರಿ ಮೆಸೆಲ್‌’ ಅಂತರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಅಬುದಾಬಿಯಲ್ಲಿ ನಡೆಯುತ್ತಿರುವ ಪರಿಸರ ಸಂರಕ್ಷಣಾ ಅಂತರಾಷ್ಟ್ರೀಯ ಒಕ್ಕೂಟದ(ಐಯುಸಿಎನ್‌) ಪ್ರಭೇd ಸಂರಕ್ಷಣಾ ಆಯೋಗದ(ಎಸ್‌ಎಸ್‌ಸಿ) ನಾಯಕರ 5ನೇ ಸಭೆಯಲ್ಲಿ ತಾಲುಕ್‌ದಾರ್‌ಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. 

ತಾಲುಕ್‌ದಾರ್‌ ಅವರು ಜೀವಪ್ರಬೇಧಗಳ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಎಸ್‌ಎಸ್‌ಸಿಯಲ್ಲಿ ಅವರ ಮಾಡಿರುವ ಕಾರ್ಯ ಮತ್ತು ಭಾರತದಲ್ಲಿ ಘೇಂಡಾಮೃಗ ಸಂರಕ್ಷಣೆಗಾಗಿ ಅವರು ಕೈಗೊಂಡಿರುವ ಕ್ರಮಗಳನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಲಾಗಿದೆ.

ADVERTISEMENT

1991ರಿಂದ ಐಯುಸಿಎನ್‌ ಎಸ್‌ಎಸ್‌ಸಿಯ ಜೊತೆ ಕೆಲಸ ಮಾಡುತ್ತಿರುವ ತಾಲೂಕ್‌ದಾರ್ 2008ರಲ್ಲಿ ‘ಏಷ್ಯನ್ ರಿನೋ ಸ್ಪೆಷಲಿಸ್ಟ್‌ ಗ್ರೂಪ್‌’ನ ಮುಖ್ಯಸ್ಥರಾಗಿದ್ದರು.

2020ರಲ್ಲಿ ಅಸ್ಸಾಂ ಸರ್ಕಾರ ರೂಪಿಸಿದ್ದ ಭಾರತದಲ್ಲಿನ ಘೇಂಡಾಮೃಗಗಳ ಸಂರಕ್ಷಣಾ ಯೋಜನೆಗೆ ತಾಲುಕ್‌ದಾರ್‌ ಸಹಕಾರ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.